ರಾಹುಲ್ ಗಾಂಧಿಯಿಂದ ಕರ್ನಾಟಕದಲ್ಲಿ ಮತಗಳ್ಳತನ ಆರೋಪ: ಚುನಾವಣಾ ಆಯೋಗ ಪ್ರತಿಕ್ರಿಯೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಕಲಿ ಮತದಾನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಅದರಲ್ಲೂ ಕರ್ನಾಟಕದಲ್ಲೂ ಮತಗಳತನ ಆಗಿರುವ ಬಗ್ಗೆ ಉಲ್ಲೇಖ ಮಾಡಿರುವ ರಾಹುಲ್ ಗಾಂಧಿ, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಬಗ್ಗೆ ಆರೋಪಿಸಿದರು. ಅಲ್ಲಿ 11 ಸಾವಿರ ಮತದಾರರು ಮೂರ್ಮೂರು ಬಾರಿ ವೋಟಿಂಗ್ ಮಾಡಿದ್ದಾರೆ. ಆದರೆ ಚುನಾವಣಾ ಆಯೋಗ ಮತದಾನದ ಪಟ್ಟಿ ನೀಡಲು ನಿರಾಕರಿಸುತ್ತಿದೆ ಎಂದು ಹೇಳಿದ್ದಾರೆ.

ಹಲವು ಮತದಾರರಿಗೆ ವಿಳಾಸವೇ ಇಲ್ಲ. ಹಲವು ಮತದಾರರ ಮನೆ ನಂ. 0 ಎಂದು ದಾಖಲು ಆಗಿದೆ. ಮನೆ ನಂ.35ರ ವಿಳಾಸದಲ್ಲಿ 80 ಮತದಾರರಿದ್ದಾರೆ. ಬೂತ್ ನಂ.366 ನಲ್ಲಿ 46 ಮತದಾರರು ಒಂದೇ ವಿಳಾಸ ಹೊಂದಿದ್ದಾರೆ. ಮತಗಳ್ಳತನ ಪತ್ತೆಗೆ ತುಂಬಾ ಸಮಯ ಹಿಡಿಯಿತು. 4 ಸಾವಿರ ಮತದಾರರ ಭಾವಚಿತ್ರ ಚಿಕ್ಕದಾಗಿ ದಾಖಲು ಮಾಡಲಾಗಿದೆ. ಕೆಲವು ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರೇ ಇಲ್ಲ. ಒಂದೇ ಹೆಸರಿನ ವ್ಯಕ್ತಿ 4 ಸ್ಥಳಗಳಲ್ಲಿ ಮತ ಹಾಕಿದ್ದಾನೆ. ಒಂದು ಕೇಂದ್ರದಲ್ಲಿ 11,965 ನಕಲಿ ವೋಟರ್ಸ್ ಇದ್ದಾರೆ. ಒಂದೇ ಗುರುತಿನಲ್ಲಿ ಹಲವು ವೋಟರ್ ಐಡಿಗಳಿವೆ ಎಂದು ನಕಲಿ ಮತದಾರರ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.

ರಾಹುಲ್ ಗಾಂಧಿ ಆರೋಪಕ್ಕೆ ರಾಜ್ಯ ಚುನಾವಣಾ ಆಯೋಗದ ಪ್ರತ್ಯುತ್ತರ
ಇದೀಗ ರಾಹುಲ್ ಗಾಂಧಿ ಆರೋಪಕ್ಕೆ ರಾಜ್ಯ ಚುನಾವಣಾ ಆಯೋಗದ ಪ್ರತ್ಯುತ್ತರ ನೀಡಿದೆ. ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಕಾಂಗ್ರೆಸ್ ಯಾವುದೇ ದೂರು ನೀಡಿಲ್ಲ. 2024ರ ನವಂಬರ್​ನಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. 2025ರ ಜನವರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಬಳಿಕ ಕಾಂಗ್ರೆಸ್ ಜಿಲ್ಲಾ ಚುನಾವಣಾಧಿಕಾರಿಗಳಿಗೂ ಕಾಂಗ್ರೆಸ್ ಯಾವುದೇ ದೂರು ನೀಡಿಲ್ಲ. ಮತದಾರರ ಪಟ್ಟಿಯನ್ನು ಆಕ್ಷೇಪಿಸಿ ದೂರು ನೀಡಿಲ್ಲ. ಚುನಾವಣಾ ಫಲಿತಾಂಶಗಳನ್ನು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ ಪ್ರಶ್ನಿಸಬಹುದು.

ಇಂದು ನೀವು ಅನರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೀರಿ. ಇದರ ಬಗ್ಗೆ ನೀವು ರಿಜಿಸ್ಟ್ರೇಷನ್ ಆಫ್ ಎಲೆಕ್ಟಾರ್ಸ್ ರೂಲ್ಸ್, 1960ರ 20(3)(ಬಿ)ಅಡಿ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ. ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದು, ಅನರ್ಹರ ಸೇರ್ಪಡೆ ಬಗ್ಗೆ ಹೆಸರು ಸಹಿತ ದೂರು ನೀಡಿ. ಬಳಿಕ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದ ರಾಜ್ಯ ಚುನಾವಣಾ ಆಯೋಗ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!