Saturday, August 30, 2025

ರಾಹುಲ್ ಗಾಂಧಿ ಬಿಹಾರ ಮತ ಯಾತ್ರೆಯಲ್ಲಿ ಪ್ರಧಾನಿ ಮೋದಿ ತಾಯಿಗೆ ಅಪಮಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಮತ ಯಾತ್ರೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಮೇಲೆ ನಿಂದನೆಯ ಘೋಷಣೆಗಳನ್ನು ಕೂಗಲಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.

ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿಯ ತಾಯಿಯ ವಿರುದ್ಧ ನಿಂದನೆಗಳನ್ನು ಮಾಡಲಾಗಿದೆ ಎಂದು ಹೇಳಿರುವ ಬಿಜೆಪಿ, ಕಾಂಗ್ರೆಸ್​ನ ಈ ಯಾತ್ರೆಯು ಎಲ್ಲಾ ಅವಮಾನ, ದ್ವೇಷದ ಮಿತಿಗಳನ್ನು ಮೀರಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಮೇಲೆ ಅವರು ವಾಗ್ದಾಳಿ ನಡೆಸಿದ ಧರ್ಮೇಂದ್ರ ಪ್ರಧಾನ್, ಪ್ರಧಾನಿ ಮೋದಿ ಅವರ ದಿವಂಗತ ತಾಯಿಯ ವಿರುದ್ಧ ಅಸಭ್ಯ ಭಾಷೆ ಬಳಸಿರುವುದು ಅತ್ಯಂತ ನಾಚಿಕೆಗೇಡಿನ ಮತ್ತು ಖಂಡನೀಯ. ಈ ಭಾಷೆ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಇಡೀ ಇಂಡಿಯ ಬ್ಲಾಕ್ ಸೇರಿದಂತೆ ಪ್ರಧಾನಿ ಮೋದಿ ವಿರುದ್ಧದ ದ್ವೇಷದ ಉತ್ತುಂಗವನ್ನು ಪ್ರತಿಬಿಂಬಿಸುತ್ತದೆ. ಆರ್‌ಜೆಡಿ-ಕಾಂಗ್ರೆಸ್ ಚುನಾವಣಾ ವೇದಿಕೆಯಿಂದ ಬಂದಿರುವ ಈ ದ್ವೇಷಪೂರಿತ ಹೇಳಿಕೆಯು ಬಿಹಾರ ಮತ್ತು ದೇಶಾದ್ಯಂತ ತಮ್ಮ ತಾಯಿಯನ್ನು ದೇವರಿಗೆ ಸಮಾನವೆಂದು ಪರಿಗಣಿಸುವ ಪ್ರತಿಯೊಬ್ಬ ಭಾರತೀಯನಿಗೆ ಮಾಡಿದ ಅವಮಾನವಾಗಿದೆ ಎಂದು ಎಕ್ಸ್​ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ