Thursday, December 11, 2025

ಜರ್ಮನಿಗೆ ಹೊರಟ ರಾಹುಲ್ ಗಾಂಧಿ: ಪರ್ಯಟನ ನಾಯಕ ಎಂದು ಕರೆದ ಬಿಜೆಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಜರ್ಮನಿಗೆ ಪ್ರಯಾಣಿಸಲಿದ್ದಾರೆ. ಈ ವಿಷಯವಾಗಿ ಬಿಜೆಪಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದು, ರಾಹುಲ್‌ ಗಾಂಧಿ ಅವರನ್ನು ಪರ್ಯಟನ ನಾಯಕ ಎಂದು ಕರೆದಿದೆ ಮತ್ತು ಅವರು ಆಗಾಗ್ಗೆ ವಿದೇಶ ಪ್ರವಾಸಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಡಿಸೆಂಬರ್ 15 ರಿಂದ 20 ರವರೆಗೆ ಗಾಂಧಿಯವರು ಬರ್ಲಿನ್‌ನಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ರಾಹುಲ್‌ ಭಾಗವಹಿಸಲಿದ್ದಾರೆ. ಚಳಿಗಾಲದ ಅಧಿವೇಶನ ಡಿಸೆಂಬರ್ 19 ರಂದು ಕೊನೆಗೊಳ್ಳುತ್ತದೆ.

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಮಾತನಾಡಿ, ಗಾಂಧಿಯವರು LoP ಎಂದರೆ ‘ಪ್ರವಾಸೋದ್ಯಮದ ನಾಯಕ’ ಮತ್ತು ‘ಪಕ್ಷದ ನಾಯಕ’ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ರಾಹುಲ್ ಗಾಂಧಿ ಒಬ್ಬ ಗಂಭೀರ ರಾಜಕಾರಣಿಯಲ್ಲ. ಜನರು ಕೆಲಸದ ಮೂಡ್‌ನಲ್ಲಿದ್ದರೆ, ಅವರು ರಜೆಯ ಮೂಡ್‌ನಲ್ಲಿದ್ದಾರೆ. ಇತ್ತೀಚೆಗೆ, ಬಿಹಾರ ಚುನಾವಣೆಯ ಸಮಯದಲ್ಲಿ, ಅವರು ಜಂಗಲ್ ಸಫಾರಿಯಲ್ಲಿದ್ದರು. ಈಗ ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಂಸತ್ತು ಅಧಿವೇಶನ ನಡೆಯುತ್ತಿರುವಾಗ ಗಾಂಧಿ ವಿದೇಶದಲ್ಲಿ ಸಮಯ ಕಳೆಯುತ್ತಾರೆ ಮತ್ತು ನಂತರ ಮಾತನಾಡಲು ಅವಕಾಶ ಸಿಗುವುದಿಲ್ಲ ಎಂದು ಹೇಳುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಬಿಜೆಪಿಯ ದಾಳಿಗೆ ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ. “(ಪ್ರಧಾನಿ) ಮೋದಿಜಿ ತಮ್ಮ ಕೆಲಸದ ಸಮಯದ ಅರ್ಧದಷ್ಟು ಭಾಗವನ್ನು ದೇಶದಿಂದ ಹೊರಗೆ ಕಳೆಯುತ್ತಾರೆ. ವಿರೋಧ ಪಕ್ಷದ ನಾಯಕ ಪ್ರಯಾಣದ ಬಗ್ಗೆ ಅವರು ಏಕೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ” ಎಂದು ಅವರು ಹೇಳಿದರು.

error: Content is protected !!