Friday, January 2, 2026

ಇ-ಸಿಗರೇಟ್ ಮಾರಾಟ ಅಡ್ಡೆಗೆ ದಾಳಿ: 1.38 ಲಕ್ಷ ಮೌಲ್ಯದ ಉತ್ಪನ್ನಗಳ ವಶ, ಓರ್ವನ ಬಂಧನ

ಹೊಸ ದಿಗಂತ ವರದಿ,ಭಟ್ಕಳ :

ನಿಷೇಧಿತ ಇ- ಸಿಗರೇಟ್‌ಗಳು ಹಾಗೂ ನಿಕೋಟಿನ್ ಲಿಕ್ವಿಡ್ ವೇಪ್ಸ್ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚೌಕ್ ಬಝಾರ್ ದುಬೈ ಮಾರ್ಕೆಟ್‌ನಲ್ಲಿ ದಾಳಿ ನಡೆಸಿದ ಪೊಲೀಸರು ೧.೩೮ ಲಕ್ಷ ಮೌಲ್ಯದ ಇ-ಸಿಗರೇಟ್ ಹಾಗೂ ವೇಪ್ಸ್‌ಗಳನ್ನು ವಶಪಡಿಸಿಕೊಂಡು ಮಾರಾಟಗಾರನನ್ನು ಬಂಧಿಸಿದ್ದಾರೆ.

ಬಂತ ಆರೋಪಿ ಕಾರಗದ್ದೆ ೨ನೇ ಕ್ರಾಸ್ ನಿವಾಸಿ ಸಿದ್ದಿಕ್ ಅಬ್ದುಲ್ ರೆಹಮಾನ್ ಮಸ್ತಾನ್ (೫೮), ತಂದೆ ಸಿದ್ದಿಕ್ ಖಾದಿರ ಮೀರಾ ಎನ್ನುವವನಾಗಿದ್ದಾನೆ. ಈತ ಯಾವುದೇ ಪರವಾನಿಗೆ ಇಲ್ಲದೆ ನಿಷೇತ ವಸ್ತುಗಳನ್ನು ತನ್ನ ಅಂಗಡಿಯಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ದಾಳಿಯಲ್ಲಿ ೭೬,೦೦೦ ಮೌಲ್ಯದ ೩೮ ಇ-ಸಿಗರೇಟ್‌ಗಳು ಹಾಗೂ ೬೨,೫೦೦ ಮೌಲ್ಯದ ೧೨೫ ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳು (ವೇಪ್ಸ್) ವಶಪಡಿಸಿಕೊಳ್ಳಲಾಗಿದೆ.

ಡಿವೈಎಸ್ಪಿ ಮಹೇಶ ಎಂ.ಕೆ ಅವರ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ ಪಿ.ಎಂ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸೈ ನವೀನ ನಾಯ್ಕ ಸೇರಿದಂತೆ ಸಿಬ್ಬಂದಿಗಳಾದ ಉದಯ ನಾಯ್ಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ಜಗದೀಶ ನಾಯ್ಕ ಹಾಗೂ ರೇವಣಸಿದ್ದಪ್ಪ ಮಾಗಿ ಪಾಲ್ಗೊಂಡಿದ್ದರು. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಠಿಣ ಕ್ರಮ :
ನಿಷೇತ ಇ-ಸಿಗರೇಟ್ ಹಾಗೂ ನಿಕೋಟಿನ್ ಉತ್ಪನ್ನಗಳ ಸಂಗ್ರಹ ಮಾರಾಟದ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

error: Content is protected !!