Tuesday, September 30, 2025

ಭಾರತ- ಭೂತಾನ್‌ ನಡುವೆ ರೈಲು ಸಂಪರ್ಕ: ಸಿದ್ಧಗೊಳ್ಳುತ್ತಿದೆ 3.456 ಕೋಟಿ ರೂ. ವೆಚ್ಚದ ಯೋಜನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕೊಕ್ರಝಾರ್ ಅನ್ನು ಭೂತಾನ್‌ನ ಗೆಲೆಫು ಜೊತೆ ಸಂಪರ್ಕಿಸಲು ಭಾರತ 3 ಸಾವಿರದ 456 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಯನ್ನು ನಿರ್ಮಿಸುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ದೆಹಲಿಯಲ್ಲಿಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಭೂತಾನ್ ದೇಶಗಳು ಪರಸ್ಪರ ಗೌರವ ಮತ್ತು ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿವೆ. ಈ ರೈಲ್ವೆ ಸಂಪರ್ಕವು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದರು.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಭಾರತ ಸರ್ಕಾರವು ಭೂತಾನ್‌ಗೆ ಅಭಿವೃದ್ಧಿ ನೆರವು ನೀಡುವ ಅತಿದೊಡ್ಡ ಪೂರೈಕೆದಾರರಾಗಿದ್ದು, ಅದರ ಆಧುನೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.