January20, 2026
Tuesday, January 20, 2026
spot_img

ಇಂಗ್ಲೆಂಡ್- ಭಾರತ ಟೆಸ್ಟ್ ಗೆ ಮಳೆರಾಯ ಎಂಟ್ರಿ: ಮ್ಯಾಚ್ ಗೆ ಬಿತ್ತು ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದೆ.

ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಮೊದಲ ದಿನದಾಟದ ಮೊದಲ ಸೆಷನ್ ಅಂತ್ಯದ ವೇಳೆಗೆ ಆರಂಭಿಕರಿಬ್ಬರನ್ನು ಕಳೆದುಕೊಂಡು 72 ರನ್ ಕಲೆಹಾಕಿದೆ. ಆದರೆ ಇದೀಗ ಮೊದಲ ಸೆಷನ್ ಅಂತ್ಯವಾಗುತ್ತಿದ್ದಂತೆ ಮಳೆರಾಯ ಎಂಟ್ರಿಕೊಟ್ಟಿದ್ದಾನೆ. ಇದರಿಂದ ಪಿಚ್​ ಮೇಲೆ ಹೊದಿಕೆಗಳನ್ನು ಹಾಸಲಾಗಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೊದಲ ದಿನದಂದು ಓವಲ್‌ನಲ್ಲಿ ಮಳೆಯಾಗುವ ಸಾಧ್ಯತೆ ಶೇ. 20 ರಷ್ಟು ಇದೆ. ಅಲ್ಲದೆ ದಿನವಿಡಿ ಮೋಡ ಕವಿದ ವಾತಾವರಣ ಇರಲಿದೆ. ಇದು ವೇಗದ ಬೌಲರ್‌ಗಳಿಗೆ ಸಾಕಷ್ಟು ಸಹಾಯ ಮಾಡುತ್ತದೆ. ಆದಾಗ್ಯೂ ಎರಡನೇ ಮತ್ತು ಮೂರನೇ ದಿನದಂದು ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ ತಾಪಮಾನವು 22 ರಿಂದ 25 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ, ಇದು ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಸಹಾಯ ಮಾಡುತ್ತದೆ. ನಾಲ್ಕನೇ ದಿನವೂ ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಆದರೆ ಕೊನೆಯ ದಿನ ಮತ್ತೆ ಹಗುರವಾದ ಮಳೆಯಾಗಬಹುದು ಎಂದು ವರದಿಯಾಗಿದೆ.

Must Read