ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ನನಗೆ ಟ್ರೋಫಿ ಸಿಕ್ಕಿಲ್ಲ ಅಷ್ಟೇ ಆದರೆ ನನಗೆ ಎಲ್ಲವೂ ಸಿಕ್ಕಿದೆ, ನಾನೇ ವಿನ್ನರ್ ಎಂದು ಖುಷಿಪಟ್ಟಿದ್ದಾರೆ.
ನಾನಂತೂ ಏನೂ ಅನ್ಕೊಂಡಿರಲಿಲ್ಲ. ತುಂಬಾ ಖುಷಿಯಾಗಿದೆ. ಯಾವ ಸ್ಥಾನ ಅನ್ನೋದು ಮ್ಯಾಟರ್ ಆಗಲ್ಲ, ನಾನು ಇಲ್ಲಿವರೆಗೂ ಬಂದಿದೀನಿ, ಟ್ರೋಫಿ ಒಂದು ಸಿಕ್ಕಿಲ್ಲ ಅಷ್ಟೇ, ಜನರು ನನ್ನನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದ್ದಾರೆ. ನಾನೇ ವಿನ್ನರ್ ಅಲ್ವಾ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಕೆಲವು ಭಾವನೆಗಳನ್ನು ತೋರ್ಪಡಿಸೋಕೆ ಆಗಲ್ಲ ಹಾಗೂ ಪದಗಳಿಂದ ವರ್ಣಿಸೋಕೆ ಆಗಲ್ಲ. ಗಿಲ್ಲಿ ಗೆದ್ದಿದ್ದು, ತುಂಬಾ ಖುಷಿಯಿದೆ. ಆಲ್ ದಿ ಬೆಸ್ಟ್, ಖುಷಿಯಾಗಿರಿ. ನನಗೆ ಕೆಲ ದಿನಗಳ ಹಿಂದೆಯಷ್ಟೇ ಕನಸು ಬಿದ್ದಿತ್ತು. ಒಂದು ಕಡೆ ನಾನು ಹಾಗೂ ಇನ್ನೊಂದು ಕಡೆ ಗಿಲ್ಲಿ ಅವರಿದ್ದರು. ನಾನಾ? ಅವರಾ? ಎಂಬ ಪ್ರಶ್ನೆಯಿತ್ತು. ಅದರಂತೆಯೇ ಆಗಿದೆ ಎಂದು ಹೇಳಿದ್ದಾರೆ.


