ಹೊಸದಿಗಂತ ವರದಿ, ಕಲಬುರಗಿ:
ನಗರದಲ್ಲಿ ನಾಳೆ ಅಂದರೆ ಮಾರ್ಚ್ 26ರಂದು ನಡೆಯಲಿರುವ ರಾಮನವಮಿ ಉತ್ಸವದ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಬುಧವಾರ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ನೇತೃತ್ವದಲ್ಲಿ ಭವ್ಯ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ನಗರದ ಹೊರವಲಯದ ರಾಮತೀರ್ಥ ಮಂದಿರದಿಂದ ಆರಂಭವಾದ ಈ ಪಥಸಂಚಲನ ಖಾದ್ರಿ ಚೌಕ್, ಶಹಾಬಜಾರ್ ನಾಕಾ, ಪ್ರಕಾಶ್ ಏಷಿಯನ್ ಮಾಲ್, ಚೌಕ್ ಸರ್ಕಲ್ ಹಾಗೂ ಮಹಿಬಾಸ್ ಮಸ್ಜಿದ್ ಮಾರ್ಗವಾಗಿ ಜಗತ್ ವೃತ್ತದವರೆಗೆ ಸಾಗಿತು.
ನಗರದ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿದ ಈ ಪಥಸಂಚಲನವು ಸಾರ್ವಜನಿಕರಲ್ಲಿ ಭದ್ರತಾ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದು, ಪಥ ಸಂಚಲನದಲ್ಲಿ 400ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.



