February 9, 2026
Monday, February 9, 2026
spot_img

ರಣಜಿ ಟ್ರೋಫಿ | ಜಮ್ಮು-ಕಾಶ್ಮೀರ ಐತಿಹಾಸಿಕ ಸಾಧನೆ: ಫಸ್ಟ್ ಟೈಮ್ ಸೆಮಿಫೈನಲ್ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಜಿ ಟ್ರೋಫಿ ಟೂರ್ನಿಯಲ್ಲಿ ಜಮ್ಮು-ಕಾಶ್ಮೀರ ತಂಡವು ಐತಿಹಾಸಿಕ ಹೆಜ್ಜೆ ಇಟ್ಟು ಸೆಮಿಫೈನಲ್‌ಗೆ ಪ್ರವೇಶಿಸಿದೆ. ದಶಕಗಳಿಂದ ಕಾಯುತ್ತಿದ್ದ ಸಾಧನೆ ಈ ಬಾರಿ ಸಾಕಾರವಾಗಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯ ಪ್ರದೇಶ್ ವಿರುದ್ಧ 56 ರನ್‌ಗಳ ಜಯ ದಾಖಲಿಸಿ ತಂಡ ಗಮನ ಸೆಳೆದಿದೆ.

ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ 194 ರನ್ ಗಳಿಸಿತು. ಪ್ರತಿಯಾಗಿ ಮಧ್ಯ ಪ್ರದೇಶ್ ಮೊದಲ ಇನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಸೀಮಿತವಾಯಿತು. ಆಖಿಬ್ ನಬಿ ಅವರ ಅಬ್ಬರದ ಬೌಲಿಂಗ್ ಎದುರಾಳಿಯನ್ನು ಸಂಕಷ್ಟಕ್ಕೆ ತಳ್ಳಿತು.

ಇದನ್ನೂ ಓದಿ:

ಮುಂದಿನ ಇನಿಂಗ್ಸ್‌ನಲ್ಲಿ ಜಮ್ಮು-ಕಾಶ್ಮೀರ 248 ರನ್ ಗಳಿಸಿ 290 ರನ್‌ಗಳ ಗುರಿ ನೀಡಿತು. ಗುರಿ ಬೆನ್ನತ್ತಿದ ಮಧ್ಯ ಪ್ರದೇಶ್ ತಂಡವನ್ನು ಬೌಲರ್‌ಗಳು 234 ರನ್‌ಗಳಿಗೆ ಕಟ್ಟಿಹಾಕಿ ಗೆಲುವು ಸಾಧಿಸಿದರು. ಮೊದಲ ಇನಿಂಗ್ಸ್‌ನಲ್ಲಿ 7 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಆಖಿಬ್ ನಬಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸಾಧನೆಯೊಂದಿಗೆ ಜಮ್ಮು-ಕಾಶ್ಮೀರ ತಂಡ ರಣಜಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !