ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಕರ್ನಾಟಕ ಮೊದಲ ಗೆಲುವು ದಾಖಲಿಸಿದೆ. ಮಯಾಂಕ್ ಅಗರ್‌ವಾಲ್ ನೇತೃತ್ವದ ತಂಡವು ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ತಾನಾಡಿದ ಮೂರನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿದೆ
348 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟು ಫಾಲೋ-ಆನ್‌ಗೆ ಒಳಗಾದ ಕೇರಳ, ನಾಲ್ಕನೇ ದಿನದ ಎರಡನೇ ಇನ್ನಿಂಗ್ಸ್‌ನಲ್ಲಿ 184 ರನ್‌ಗಳಿಗೆ ಆಲೌಟ್ ಆಗಿ, ಇನ್ನಿಂಗ್ಸ್ ಮತ್ತು 164 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು.
ಆರಂಭಿಕ ಆಟಗಾರ ಕೃಷ್ಣಪ್ರಸಾದ್ 33 ರನ್ ಗಳಿಸಿದರೆ, ಅಹ್ಮದ್ ಇಮ್ರಾನ್ 23, ಬಾಬಾ ಅಪರಾಜಿತ್ 19 ಮತ್ತು ಸಚಿನ್ ಬೇಬಿ 12 ರನ್ ಗಳಿಸಿ ಔಟಾದರು.ನಾಯಕ ಮೊಹಮ್ಮದ್ ಅಜರುದ್ದೀನ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾದರು.
ಕರ್ನಾಟಕ ಪರ ಮೊಹ್ಸಿನ್ ಖಾನ್ 6 ವಿಕೆಟ್ ಪಡೆದರೆ, ವಿದ್ಯುತ್ ಕಾವೇರಪ್ಪ ಎರಡು ವಿಕೆಟ್ ಕಿತ್ತರು. ಈ ಗೆಲುವಿನೊಂದಿಗೆ ಎಲೈಟ್ ಗ್ರೂಪ್ ‘ಬಿ’ಯಲ್ಲಿ ಕರ್ನಾಟಕ 11 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದರೆ, ಎರಡು ಅಂಕಗಳನ್ನು ಹೊಂದಿರುವ ಕೇರಳ ಏಳನೇ ಸ್ಥಾನದಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಪರ ದ್ವಿಶತಕ ಸಿಡಿಸಿದ ಕರುಣ್ ನಾಯರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

