Thursday, December 4, 2025

ಸಿನಿಮಾ ರಿಲೀಸ್‌ಗೂ ಮುನ್ನ ಚಪ್ಪಡಿ ಕಲ್ಲು ಎಳೆದುಕೊಂಡ ರಣ್‌ವೀರ್‌ ಸಿಂಗ್‌, ಬೆಂಗಳೂರಿನಲ್ಲೂ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಣವೀರ್ ಸಿಂಗ್ ‘ದೈವವನ್ನು ದೆವ್ವ’ ಎಂದು ಕರೆದಿದ್ದರು. ದೈವವನ್ನು ಅನುಕರಿಸಲು ಹೋಗಿ ಟೀಕೆಗೆ ಗುರಿಯಾಗಿದ್ದರು. ಈಗ ಬೆಂಗಳೂರಿನಲ್ಲೂ ಅವರ ಮೇಲೆ ದೂರು ನೀಡಲಾಗಿದೆ. ಧುರಂಧರ್ ಸಿನಿಮಾ ರಿಲೀಸ್​ಗೂ ಮೊದಲೇ ಅವರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.

ಇತ್ತಿಚೇಗೆ ಗೋವಾದಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆದಿದೆ. ಈ ವೇಳೆ ರಣವೀರ್ ಸಿಂಗ್ ಅವರು ದೈವದ ಅವಹೇಳನ ಮಾಡಿದ್ದಾರೆ. ಉಳ್ಳಾಳ್ತಿ ದೈವವನ್ನು ‘ಫೀಮೇಲ್ ಗೋಸ್ಟ್ ’ ಅಂದರೆ ‘ಹೆಣ್ಣು ದೆವ್ವ’ ಎಂದು ಸಂಬೋಧಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರು ಕ್ಷಮೆ ಕೂಡ ಕೇಳಿದ್ದಾರೆ. ಆದಾಗ್ಯೂ ಅವರ ವಿರುದ್ಧ ದೂರು ದಾಖಲಾಗಿದೆ. ಕ್ಷಮೆ ಒಪ್ಪಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬಂದಿದೆ.

ಈ ಹೇಳಿಕೆ ಸಂಬಂಧ ವಕೀಲ ಪ್ರಶಾಂತ್ ಮೇತಲ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಎಫ್​ಐಆರ್ ದಾಖಲಿಸುವಂತೆ ಪ್ರಶಾಂತ್ ಆಗ್ರಹಿಸಿದ್ದಾರೆ.

‘ರಣವೀರ್ ಸದ್ಯ ಕ್ಷಮೇ ಕೇಳಿದ್ದಾರೆ. ಆದರೆ, ಅದನ್ನ ಒಪ್ಪಲು ಸಾಧ್ಯವಿಲ್ಲ. ರಣವೀರ್ ದಂಡನಾರ್ಹ ಅಪರಾಧ ಮಾಡಿದ್ದು ಅವರಿಗೆ ಕಾನೂನು ರೀತಿ ಶಿಕ್ಷೆ ಆಗಬೇಕು’ ಎಂಬುದು ಪ್ರಶಾಂತ್ ಅವರ ವಾದವಾಗಿದೆ.

error: Content is protected !!