Sunday, November 9, 2025

ಅತ್ಯಾಚಾರ ಪ್ರಕರಣ: ಪಂಜಾಬ್ ನಿಂದ ಎಸ್ಕೇಪ್ ಆದ ಎಎಪಿ ಶಾಸಕ ಆಸ್ಟ್ರೇಲಿಯಾದಲ್ಲಿ ಪ್ರತ್ಯಕ್ಷ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಚಾರ ಪ್ರಕರಣದಲ್ಲಿ ಸೆ.2 ರಿಂದ ತಲೆಮರೆಸಿಕೊಂಡ ಪಂಜಾಬ್ ಎಎಪಿ ಶಾಸಕ ಹರ್ಮಿತ್‌ ಸಿಂಗ್‌ ಪಠಾಣಮಜ್ರಾ ಆಸ್ಟ್ರೇಲಿಯಾದಲ್ಲಿ ಇದ್ದು, ಜಾಮೀನು ಸಿಕ್ಕ ಬಳಿಕ ಭಾರತಕ್ಕೆ ವಾಪಸ್‌ ಬರುತ್ತೇನೆಂದು ಹೇಳಿದ್ದಾರೆ.

ಪಟಿಯಾಲ ಪೊಲೀಸರು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕನ ವಿರುದ್ಧ ಲುಕ್‌-ಔಟ್‌ ನೋಟಿಸ್ ಕೂಡ ಹೊರಡಿಸಿದ್ದಾರೆ. ಶುಕ್ರವಾರ ಆಸ್ಟ್ರೇಲಿಯಾ ಮೂಲದ ಪಂಜಾಬಿ ವೆಬ್ ಚಾನೆಲ್‌ಗೆ ನೀಡಿದ ವೀಡಿಯೊ ಸಂದರ್ಶನದಲ್ಲಿ ಪಠಾಣ್‌ಮಜ್ರಾ ಕಾಣಿಸಿಕೊಂಡಿದ್ದಾರೆ. ‘ಜಾಮೀನು ಪಡೆದ ನಂತರವೇ ಮನೆಗೆ ಮರಳುತ್ತೇನೆ’ ಎಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ತಮ್ಮ ವಿರುದ್ಧದ ಪ್ರಕರಣವನ್ನು ನಿರಾಕರಿಸಿದ್ದಾರೆ. ಇದು ರಾಜಕೀಯ ಪಿತೂರಿ. ಪಂಜಾಬ್‌ ಜನರ ಪರವಾಗಿ ಮಾತನಾಡುವ ಧ್ವನಿ ಅಡಗಿಸುವ ಉದ್ದೇಶದಿಂದ ನನ್ನ ಮೇಲೆ ಸುಳ್ಳಿನ ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಠಾಣಮಜ್ರಾ ಕೋರ್ಟಿಗೆ ಹಾಜರಾಗಿಲ್ಲ. ಪಟಿಯಾಲ ನ್ಯಾಯಾಲಯವು ಈಗಾಗಲೇ ಘೋಷಿತ ಅಪರಾಧಿ ವಿಚಾರಣೆಯನ್ನು ಪ್ರಾರಂಭಿಸಿದೆ.

error: Content is protected !!