ಹೊಸದಿಗಂತ ವರದಿ,ಯಲ್ಲಾಪುರ:
ಅತ್ಯಾಚಾರ ಆರೋಪ ಸಾಬಿತಾದ ಹಿನ್ನಲೆಯಲ್ಲಿ ಆರೋಪಿ ಹುಳಸೆ ಮನೆಯ ನಾಗರಾಜ ಸಿದ್ದಿ ಈತನಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗು 15 ಸಾವಿರ ದಂಡ ಮತ್ತು ಸಂತ್ರಸ್ಥೆಗೆ 25 ಸಾವಿರ ರೂ ಪರಿಹಾರ ನೀಡುವಂತೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಪೀಠಾಸೀನ ಶಿರಸಿ ನ್ಯಾಯದೀಶರಾದ ಕಿರಣ ಕಿಣಿ ಮಹತ್ವದ ತೀರ್ಪು ನೀಡಿದ್ದಾರೆ.
ಈ ಪ್ರಕರಣಕ್ಕೆ ಆರೋಪಿಗೆ ಶಿಕ್ಷೆಯಾಗುವಂತೆ ಶಿರಸಿ ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ್ ವಾದ ಮಂಡಿಸಿದ್ದರು.
ಈ ಅತ್ಯಾಚಾರ ಪ್ರಕರಣ 2022ರಲ್ಲಿ ಯಲ್ಲಾಪುರ ತಾಲೂಕಿನ ಹುಳಸೆ ಮನೆ ಯಲ್ಲಿ ನಡೆದಿತ್ತು.
ಅತ್ಯಾಚಾರ ಆರೋಪ ಸಾಬೀತು: ಆರೋಪಿಗೆ 10 ವರ್ಷ ಕಾರಾಗೃಹ ಶಿಕ್ಷೆ, 15 ಸಾವಿರ ದಂಡ
