February 16, 2026
Monday, February 16, 2026
spot_img

T20 ಕ್ರಿಕೆಟ್‌ನಲ್ಲಿ ರಶೀದ್ ಖಾನ್ ಹೊಸ ವಿಶ್ವ ದಾಖಲೆ: 700 ವಿಕೆಟ್ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅಪೂರ್ವ ಸಾಧನೆ ಮಾಡಿ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ. ದೆಹಲಿಯಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಯುಎಇ ವಿರುದ್ಧ ಬೌಲಿಂಗ್ ಮಾಡಿದ ಅವರು 4 ಓವರ್‌ಗಳಲ್ಲಿ 24 ರನ್ ನೀಡಿ ಒಂದು ವಿಕೆಟ್ ಪಡೆದರು. ಆ ಒಂದು ವಿಕೆಟ್‌ನೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಅಚ್ಚರಿ ಸಾಧನೆ ಮಾಡಿದ್ದಾರೆ.

ಇದಕ್ಕೂ ಮುನ್ನ ಟಿ20 ಇತಿಹಾಸದಲ್ಲಿ ಯಾರೂ ಕೂಡ 700 ವಿಕೆಟ್‌ಗಳನ್ನು ಕಬಳಿಸಿರಲಿಲ್ಲ. ಹಲವು ಬೌಲರ್‌ಗಳು 600ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದರೂ, ಏಳು ನೂರರ ಗಡಿ ದಾಟಿದ್ದು ಇದೇ ಮೊದಲ ಬಾರಿ. ಕೇವಲ 27ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ಮತ್ತಷ್ಟು ವಿಶೇಷವಾಗಿದೆ.

ಇದನ್ನೂ ಓದಿ:

ಈವರೆಗೆ ರಶೀದ್ ಖಾನ್ 513 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿ 11794 ಎಸೆತಗಳನ್ನು ಎಸೆದಿದ್ದಾರೆ. ಈ ಅವಧಿಯಲ್ಲಿ 12961 ರನ್ ನೀಡಿ 700 ವಿಕೆಟ್‌ಗಳನ್ನು ಪಡೆದು ವಿಶ್ವದ ಮೊದಲ ಹಾಗೂ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಡ್ವೇನ್ ಬ್ರಾವೊ (631 ವಿಕೆಟ್) ಇದ್ದರೆ, ಮೂರನೇ ಸ್ಥಾನದಲ್ಲಿ ಸುನಿಲ್ ನರೈನ್ (613 ವಿಕೆಟ್) ಇದ್ದಾರೆ. ಈ ಹಿನ್ನೆಲೆ ರಶೀದ್ ಖಾನ್ ಅವರ ದಾಖಲೆಯನ್ನು ಮುರಿಯುವುದು ಸುಲಭವಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !