Wednesday, December 3, 2025

CINE |ಇಂದು ರಶ್ಮಿಕಾ, ವಿಜಯ್ ದೇವರಕೊಂಡ ಮದುವೆ ಅಫೀಶಿಯಲ್‌ ಅನೌನ್ಸ್‌ಮೆಂಟ್‌❤️?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಈಗಾಗಲೇ ಫಿಕ್ಸ್‌ ಆಗಿದೆ. ಮುಂದಿನ ವರ್ಷದ ಫೆಬ್ರವರಿ 26 ರಂದು ಇಬ್ಬರ ಮದುವೆ ನಡೆಯಲಿದ್ದು ಇದೂವರೆಗೆ ಜೋಡಿ ಅಧಿಕೃತವಾಗಿ ಎಲ್ಲಿಯೂ ತಿಳಿಸಿಲ್ಲ. ಆದರೆ ಇಂದು ಸುದ್ದಿಗೋಷ್ಠಿ ನಡೆಸಿ ಜೋಡಿ ಮದುವೆ ವಿಚಾರವನ್ನು ಅಧಿಕೃತಗೊಳಿಸುವ ಸಾಧ್ಯತೆಯಿದೆ.

ಹೈದ್ರಾಬಾದ್‌ನಲ್ಲಿ ನಡೆಯುವ ಸುದ್ದಿಗೋಷ್ಠಿಯಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ತಮ್ಮ ಮದುವೆ ವಿಚಾರವನ್ನ ಅಧಿಕೃತವಾಗಿ ಮಾಧ್ಯಮದ ಎದುರು ಘೋಷಿಸುವ ಸಾಧ್ಯತೆ ಇದೆ. ಈ ಮೂಲಕ ಎಲ್ಲಾ ವದಂತಿಗೂ ರಶ್ಮಿಕಾ ವಿಜಯ್ ಜೋಡಿ ತೆರೆ ಎಳೆಯಲಿದ್ದಾರೆ.

ಏಳು ವರ್ಷಗಳ ಪರಸ್ಪರ ಪ್ರೀತಿ ಬಳಿಕ ಇದೀಗ ಮದುವೆಯಾಗುತ್ತಿರುವ ಸ್ಟಾರ್ ಕಪಲ್ ತಮ್ಮ ಮದುವೆ ಕುರಿತು ಅಧಿಕೃತ ಘೋಷಣೆ ಮಾಡಲು ಸುದ್ದಿಗೋಷ್ಠಿ ಕರೆದಿಲ್ಲ. ಆದರೆ ರಶ್ಮಿಕಾ ನಟನೆಯ ದಿ ಗರ್ಲ್‌ಫ್ರೆಂಡ್‌ ಚಿತ್ರದ ಸಕ್ಸಸ್‌ಮೀಟ್ ಸುದ್ದಿಗೋಷ್ಠಿ ಕರೆಯಲಾಗಿದೆ.

ವಿಶೇಷವಾಗಿ ಈ ರಶ್ಮಿಕಾ ಸಿನಿಮಾದ ಸಕ್ಸಸ್‌ಮೀಟ್‌ಗೆ ನಟ ವಿಜಯ್ ದೇವರಕೊಂಡ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಮಾಧ್ಯಮದವರ ಎಲ್ಲಾ ಪ್ರಶ್ನೆಗೆ ಜೋಡಿ ಉತ್ತರ ಕೊಡುವ ನಿರೀಕ್ಷೆ ಇದೆ. ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲು ತಯಾರಿ ನಡೆದಿದೆ.

error: Content is protected !!