Friday, December 5, 2025

ರತನ್ ಟಾಟಾ ಮಲ ತಾಯಿ, ಲ್ಯಾಕ್‌ಮೆ,ಟ್ರೆಂಟ್ ಪ್ರತಿಷ್ಠಿತ ಬ್ರ್ಯಾಂಡ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರತನ್ ಟಾಟಾ ಮಲ ತಾಯಿ, ಲ್ಯಾಕ್‌ಮೆ, ವೆಸ್ಟ್‌ಸೈಡ್, ಟ್ರೆಂಟ್ ಸೇರಿದಂತೆ ಪ್ರತಿಷ್ಠಿತ ಬ್ರ್ಯಾಂಡ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನರಾಗಿದ್ದಾರೆ.

ಕಳೆದ ಹಲವು ದಿನಗಳಿಂದ 95 ವಯಸ್ಸಿನ ಸೈಮನ್ ಟಾಟಾ ಪಾರ್ಕಿಸನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ಪೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಮನ್ ಟಾಟಾ ಇಂದು ನಿಧನರಾಗಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಸೈಮನ್ ಟಾಟಾ ಪಾರ್ಕಿಸನ್ ಆರೋಗ್ಯ ಸಮಸ್ಯೆಯಿಂದ ತೀವ್ರ ಆಸ್ವಸ್ಥಗೊಂಡಿದ್ದರು. ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಮನ್ ಟಾಟಾ ಅವರನ್ನು ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿತ್ತು.

ಇಡೀ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಮಹಿಳಾ ಉದ್ಯಮಿ ಸೈಮನ್ ಟಾಟಾ. ಸ್ವಿಟ್ಜರ್ಲೆಂಡ್‌ನಲ್ಲಿ ಜನಿಸಿದ ಸೈಮನ್ ಟಾಟಾ ಭಾರತಕ್ಕೆ ಪ್ರವಾಸಕ್ಕೆ ಬಂದು ಬಳಿಕ ಇಲ್ಲಿಯವರಾಗಿ ಉಳಿದರು.

ಸೈಮನ್ ಟಾಟಾ ಕೆಲ ವರ್ಷಗಳಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. 2006ರ ಬಳಿಕ ಸೈಮನ್ ಟಾಟಾ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಅದರಲ್ಲೂ 2020ರ ಬಳಿಕ ಸೈಮನ್ ಟಾಟಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. 2024ರಲ್ಲಿ ಅಕ್ಟೋಬರ್ ತಿಂಗಳಲ್ಲಿ ರತನ್ ಟಾಟಾ ನಿಧನರಾದಾಗ ಅಂತ್ಯಸಂಸ್ಕಾರದಲ್ಲಿ ಸೈಮನ್ ಟಾಟಾ ಕಾಣಿಸಿಕೊಂಡಿದ್ದರು. ಇದು ಕೊನೆಯದಾಗಿ ಸೈಮನ್ ಟಾಟಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ರತನ್ ಟಾಟಾ ಮಲತಾಯಿಯಾಗಿದ್ದ ಸೈಮನ್ ಟಾಟಾ ಮೇಲೆ ವಿಶೇಷ ಪ್ರೀತಿ ಇತ್ತು. ರತನ್ ಟಾಟಾ ನಿಧನದ ಬಳಿಕ ಸೈಮನ್ ಟಾಟಾ ಪುತ್ರ ನೋಯೆಲ್ ಟಾಟಾ ಸದ್ಯ ಟಾಟಾ ಟ್ರಸ್ಟ್ ಸಂಸ್ಥೆಯ ಚೇರ್ಮನ್ ಆಗಿದ್ದಾರೆ.

ನವಲ್ ಟಾಟಾ ವರಿಸಿದ್ದ ಸೈಮನ್
ಭಾರತಕ್ಕೆ ಪ್ರವಾಸ ಬಂದ ಸೈಮನ್, ಭಾರತದ ಪ್ರಸಿದ್ಧ ಉದ್ಯಮಿಯಾಗಿದ್ದ ನವಲ್ ಟಾಟಾ ಪರಿಚಯವಾಗಿತ್ತು. ಈ ವೇಳೆ ನವಲ್ ಟಾಟಾ ವಿಚ್ಚೇದನ ಪಡೆದುಕೊಂಡಿದ್ದು. ತನಗಿಂತ 26 ವರ್ಷ ಹಿರಿಯರಾಗಿದ್ದ ನವಲ್ ಟಾಟಾ ವರಿಸಿದ ಸೈಮನ್ ಟಾಟಾ ಮುಂಬೈನಲ್ಲೇ ಉಳಿದುಕೊಂಡರು.

error: Content is protected !!