January15, 2026
Thursday, January 15, 2026
spot_img

Raw egg vs boiled egg | ಫಿಟ್ನೆಸ್ ಪ್ರಿಯರಿಗೆ ಯಾವುದು ತಿಂದ್ರೆ ಒಳ್ಳೆದು?

ಜಿಮ್‌ ಹೋಗುವವರಿಗೊಂದು ಸಾಮಾನ್ಯ ಪ್ರಶ್ನೆ. ಮಸಲ್ ಬೆಳೆಸೋಕೆ ಹಸಿ ಮೊಟ್ಟೆ ತಿನ್ನೋದು ಉತ್ತಮವೋ, ಬೇಯಿಸಿದ ಮೊಟ್ಟೆಯೇ ಒಳ್ಳೆಯದೋ? ಸಿನಿಮಾಗಳು, ಜಿಮ್ ರೀಲ್ಸ್‌ಗಳಲ್ಲಿ ಹಸಿ ಮೊಟ್ಟೆ ತಿನ್ನುವ ದೃಶ್ಯಗಳು ಹೆಚ್ಚಾಗಿ ನೋಡ್ತೇವೆ. ಆದರೆ ವಾಸ್ತವದಲ್ಲಿ ದೇಹಕ್ಕೆ ಯಾವುದು ಸುರಕ್ಷಿತ ಮತ್ತು ಪರಿಣಾಮಕಾರಿ? ಎನ್ನೋದಕ್ಕೆ ಉತ್ತರ ಇಲ್ಲಿದೆ

  • ಹಸಿ ಮೊಟ್ಟೆಯಲ್ಲಿ ಜೀರ್ಣಶಕ್ತಿಯ ಸಮಸ್ಯೆ: ಹಸಿ ಮೊಟ್ಟೆಯಲ್ಲಿರುವ ಪ್ರೋಟೀನ್ ದೇಹಕ್ಕೆ ಪೂರ್ಣವಾಗಿ ಹೀರಿಕೊಳ್ಳುವುದಿಲ್ಲ. ಸುಮಾರು 50% ಮಾತ್ರ ಜೀರ್ಣವಾಗುತ್ತದೆ.
  • ಬೇಯಿಸಿದ ಮೊಟ್ಟೆ ಹೆಚ್ಚು ಪ್ರೋಟೀನ್ ಲಭ್ಯ ಮಾಡಿಸುತ್ತದೆ: ಬೇಯಿಸಿದ ಮೊಟ್ಟೆಯಲ್ಲಿ 90% ಕ್ಕೂ ಹೆಚ್ಚು ಪ್ರೋಟೀನ್ ದೇಹಕ್ಕೆ ಸುಲಭವಾಗಿ ಲಭ್ಯವಾಗುತ್ತದೆ. ಮಸಲ್ ರಿಪೇರಿ ಮತ್ತು ಗ್ರೋತ್‌ಗೆ ಇದು ಉತ್ತಮ.
  • ಹಸಿ ಮೊಟ್ಟೆಯಲ್ಲಿ ಸೋಂಕಿನ ಅಪಾಯ: ಹಸಿ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚು. ಇದು ಫುಡ್ ಪಾಯ್ಸನ್ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಬೇಯಿಸಿದ ಮೊಟ್ಟೆ ಸುರಕ್ಷಿತ: ಸರಿಯಾಗಿ ಬೇಯಿಸಿದ ಮೊಟ್ಟೆ ಬ್ಯಾಕ್ಟೀರಿಯಾದಿಂದ ಮುಕ್ತವಾಗಿರುತ್ತದೆ. ದಿನನಿತ್ಯ ಜಿಮ್ ಮಾಡುವವರಿಗೆ ಇದು ಸೂಕ್ತ ಮತ್ತು ಆರೋಗ್ಯಕರ.
  • ಬಿಸಿ ನೀರಿನಲ್ಲಿ ಬೇಯಿಸುವಾಗ ಮೊಟ್ಟೆಯಲ್ಲಿರುವ ವಿಟಮಿನ್‌ಗಳು, ಖನಿಜಗಳು ಹೆಚ್ಚು ಉಳಿದುಕೊಳ್ಳುತ್ತವೆ. ಹಸಿಯಾಗಿ ತಿಂದರೆ ನ್ಯೂಟ್ರಿಯಂಟ್ ನಷ್ಟವಾಗಬಹುದು.

ಜಿಮ್‌ ಫ್ರೀಕ್ಸ್‌ಗಳಿಗೆ ಬೇಯಿಸಿದ ಮೊಟ್ಟೆ ಅತ್ಯುತ್ತಮ. ಇದು ಸುರಕ್ಷಿತ, ಪ್ರೋಟೀನ್‌ ಹೆಚ್ಚು, ಹಾಗೂ ದೇಹಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.

Most Read

error: Content is protected !!