Saturday, August 30, 2025

Raw Milk | ನೀವು ಹಸಿ ಹಾಲು ಕುಡಿತೀರಾ? ಹಾಗಿದ್ರೆ ಈ ಸುದ್ದಿ ಓದ್ಲೇ ಬೇಕು!

ದೇಹದ ಆರೋಗ್ಯಕ್ಕಾಗಿ ಹಾಲು ಅತ್ಯಂತ ಮುಖ್ಯ ಆಹಾರಗಳಲ್ಲಿ ಒಂದು. ಹಾಲಿನಲ್ಲಿ ಇರುವ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ದೇಹಕ್ಕೆ ಶಕ್ತಿ ನೀಡುತ್ತವೆ, ಮೂಳೆಗಳನ್ನು ಬಲಪಡಿಸುತ್ತವೆ. ಅದಕ್ಕಾಗಿಯೇ ಮಕ್ಕಳಿಂದ ಹಿಡಿದು ಹಿರಿಯರವರವರೆಗೆ ಎಲ್ಲರೂ ದಿನನಿತ್ಯ ಹಾಲು ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ ಕೆಲವರು ಹಾಲನ್ನು ಕಾಯಿಸದೆ ಹಸಿಯಾಗಿಯೇ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಅವರ ಅಭಿಪ್ರಾಯದಲ್ಲಿ ಹಸಿ ಹಾಲೇ ಹೆಚ್ಚು ಆರೋಗ್ಯಕರ ಎಂದು ನಂಬಿದ್ದರೂ, ತಜ್ಞರ ಪ್ರಕಾರ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಹಸಿ ಹಾಲಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಜೀವಿಗಳು ಹೆಚ್ಚಾಗಿ ಇರುತ್ತವೆ. ಲಿಸ್ಟೇರಿಯಾ ಮೊನೊಸೈಟೊಜೆನ್ಸ್ ಎಂಬ ಬ್ಯಾಕ್ಟೀರಿಯಾ ಹಸಿ ಹಾಲಿನಲ್ಲಿದ್ದು, ಇದರಿಂದ ಲಿಸ್ಟರಿಯೊಸಿಸ್ ಎಂಬ ಸೋಂಕು ಉಂಟಾಗಬಹುದು. ವಿಶೇಷವಾಗಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಹಸಿ ಹಾಲು ಅಪಾಯಕಾರಿ. ಗರ್ಭಪಾತ, ಅಕಾಲಿಕ ಜನನ ಅಥವಾ ಮಗುವಿನ ಆರೋಗ್ಯದ ತೊಂದರೆಗಳಿಗೆ ಇದು ಕಾರಣವಾಗುವ ಸಾಧ್ಯತೆ ಇದೆ.

ಜೊತೆಗೆ ಹಸಿ ಹಾಲು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು, ಅತಿಸಾರ, ಆಸಿಡಿಟಿ, ನಿರ್ಜಲೀಕರಣ ಸೇರಿದಂತೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಹಕ್ಕಿ ಜ್ವರದಂತಹ ಸೋಂಕುಗಳು ಹರಡುವ ಸಾಧ್ಯತೆಯೂ ಇದೆ.

ಹಾಲು ಆರೋಗ್ಯಕ್ಕೆ ಮುಖ್ಯವಾದರೂ ಅದನ್ನು ಸರಿಯಾಗಿ ಕಾಯಿಸಿ ಕುಡಿಯುವುದೇ ಸುರಕ್ಷಿತ. ಹಸಿ ಹಾಲು ಸೇವನೆಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ವೈದ್ಯರು ಪಾಸ್ಚರೈಸ್ ಮಾಡಿದ ಅಥವಾ ಕಾಯಿಸಿದ ಹಾಲನ್ನು ಮಾತ್ರ ಸೇವಿಸಲು ಸಲಹೆ ನೀಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಲು ಹಾಲಿನ ಸರಿಯಾದ ಸೇವನೆ ಅತ್ಯಂತ ಅಗತ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

ಇದನ್ನೂ ಓದಿ