ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ವಾಯುಪಡೆಯ 93ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀಡಲಾದ ಭೋಜನ ಮೆನು ಇದೀಗ ಸಖತ್ ವೈರಲ್ ಆಗಿದೆ.
ಹೌದು ,ಐಎಎಫ್‌ನ 93 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಭಕ್ಷ್ಯಗಳನ್ನೊಳಗೊಂಡ ಮೆನು ನಲ್ಲಿ ಆಪರೇಷನ್ ಸಿಂದೂರ್ ದಾಳಿಯ ಸಮಯದಲ್ಲಿ ವಾಯುಪಡೆಯು ಗುರಿಯಾಗಿಸಿಕೊಂಡ ಪಾಕಿಸ್ತಾನದ ನಗರಗಳ ಹೆಸರನ್ನು ಪ್ರತಿಯೊಂದು ಖಾದ್ಯಕ್ಕೂ ಇಡಲಾಗಿರುವುದು ವಿಶೇಷ. ಈ ಊಟದ ಮೆನು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಈ ಕ್ರಿಯೇಟಿವಿಯನ್ನು ಮೆಚ್ಚಿಕೊಂಡಿದ್ದಾರೆ.
ಶಿವ ಅರೂರ್ ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್‌ನಲ್ಲಿ ಐಎಎಫ್ ನ 93 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಭಕ್ಷ್ಯಗಳನ್ನೊಳಗೊಂಡ ಮೆನುವನ್ನು ಹಂಚಿಕೊಳ್ಳಲಾಗಿದೆ.
IAF ಮೆನು ಹೀಗಿದೆ:
ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ
ರಫೀಕಿ ರಾಹರ ಮಟನ್
ಭೋಲಾರಿ ಪನೀರ್
ಮೇಥಿ ಮಲೈ ಸುಕ್ಕುರ್ ಶಾಮ್ ಸವೇರಾ ಕೋಫ್ತಾ
ಸರ್ಗೋಧ ದಲ್ ಮಖಾನಿ
ಜಾಕೋಬಾಬಾದ್ ಮೇವಾ ಪುಲಾವ್
ಬಹವಲ್ಪುರ್ ನಾನ್
ಡೆಸರ್ಟ್ಸ್
ಬಾಲಾಕೋಟ್ ತಿರಮಿಸು
ಮುಜಾಫರಾಬಾದ್ ಕುಲ್ಫಿ ಫಲೂದಾ
ಮುರಿಡ್ಕೆ ಮೀಠಾ ಪನ್
ರಾವಲ್ಪಿಂಡಿ, ಬಾಲಕೋಟ್, ಬಹವಾಲ್ಪುರ್, ಮುಜಫರಾಬಾದ್, ಮುರಿಡ್ಕೆ – ಈ ಪ್ರತಿಯೊಂದು ಹೆಸರುಗಳು ಆಪರೇಷನ್ ಸಿಂದೂರ್ ಸಮಯದಲ್ಲಿ ಗುರಿಯಾಗಿಸಿಕೊಂಡ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಗರಗಳಲ್ಲಿ ಸೇರಿವೆ. ಅಧಿಕೃತವಾಗಿ ದೃಢೀಕರಿಸದಿದ್ದರೂ, ಇದು ಅಕ್ಟೋಬರ್ 8, 1932 ರಂದು ವಾಯುಪಡೆಯ ರಚನೆಯ ವಾರ್ಷಿಕ ಆಚರಣೆಯೊಂದಿಗೆ ಹೊಂದಿಕೆಯಾಯಿತು.