ಕಾಫಿ ಪ್ರಿಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬರುತ್ತಿದೆ. ಬೆಳಿಗ್ಗೆ ಎದ್ದ ಕೂಡಲೇ ಅಥವಾ ಕೆಲಸದ ನಡುವೆಯೇ ಒಂದು ಕಪ್ ಕಾಫಿ ಕುಡಿಯದೇ ದಿನವೇ ಮುಗಿಯದವರಿದ್ದಾರೆ. ಬ್ಲಾಕ್ ಕಾಫಿ, ಅರೇಬಿಕಾ, ರೋಬಸ್ಟಾ, ಲಿಬೆರಿಕಾ ಮತ್ತು ಎಕ್ಸೆಲ್ಸಾ ಎಂಬ ವಿಭಿನ್ನ ರುಚಿಗಳಲ್ಲಿ ಕಾಫಿಯನ್ನು ಸೇವಿಸುವವರೂ ಕಡಿಮೆ ಇಲ್ಲ. ಆದರೆ ಆರೋಗ್ಯ ತಜ್ಞರ ಪ್ರಕಾರ, ಕಾಫಿಯನ್ನು ಯಾವಾಗ ಕುಡಿಯಬೇಕು ಮತ್ತು ಅದರೊಂದಿಗೆ ಯಾವ ಆಹಾರಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ತಪ್ಪಾದ ಸಮಯದಲ್ಲಿ ಅಥವಾ ತಪ್ಪಾದ ಆಹಾರದೊಂದಿಗೆ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ ಉಂಟಾಗಬಹುದು.

ತಜ್ಞರ ಪ್ರಕಾರ, ಕಾಫಿ ಕುಡಿದ ತಕ್ಷಣ ಜಂಕ್ ಫುಡ್, ಹುರಿದ ಆಹಾರ ಅಥವಾ ಕೆಂಪು ಮಾಂಸ ಸೇವನೆ ಮಾಡುವುದು ಸೂಕ್ತವಲ್ಲ. ಈ ಸಂಯೋಜನೆ ದೇಹದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚಿಸಿ ಜೀರ್ಣಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಧಾನ್ಯಗಳೊಂದಿಗೆ ಕಾಫಿ ಸೇವಿಸಿದರೆ, ಅವುಗಳಲ್ಲಿರುವ ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಇದೇ ರೀತಿ ಕಿತ್ತಳೆ, ಮೂಸುಂಬಿ, ದ್ರಾಕ್ಷಿ ಮುಂತಾದ ಸಿಟ್ರಸ್ ಹಣ್ಣುಗಳನ್ನು ಸೇವಿಸಿದ ತಕ್ಷಣ ಕಾಫಿ ಕುಡಿಯಬಾರದು. ಇದು ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚಿಸಿ ಹೊಟ್ಟೆಉರಿ ಮತ್ತು ಜೀರ್ಣಕ್ರಿಯೆ ತೊಂದರೆಯನ್ನುಂಟುಮಾಡುತ್ತದೆ.
ಹಾಲಿನೊಂದಿಗೆ ಕಾಫಿ ಸೇವಿಸುವುದು ಸಹ ಶಿಫಾರಸು ಮಾಡಲಾಗುವುದಿಲ್ಲ. ಏಕೆಂದರೆ, ಕಾಫಿಯು ಹಾಲಿನಲ್ಲಿರುವ ಕ್ಯಾಲ್ಸಿಯಂ ಹೀರಿಕೊಳ್ಳುವುದನ್ನು ತಡೆಯುತ್ತದೆ.
