Sunday, October 12, 2025

Read It | ಸಾಕ್ಸ್ ಇಲ್ಲದೆ ಶೂ ಹಾಕ್ತಿದ್ದೀರಾ? ಇವತ್ತೇ ನಿಲ್ಲಿಸಿಬಿಡಿ!

ಇತ್ತೀಚಿನ ದಿನಗಳಲ್ಲಿ ಫ್ಯಾಷನ್‌ನ ಹೆಸರಿನಲ್ಲಿ ಸಾಕ್ಸ್‌ ಇಲ್ಲದೆ ಶೂಗಳನ್ನು ಧರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಈ ಅಭ್ಯಾಸ ಪಾದಗಳ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಅನ್ನೋದು ನಿಮಗೆ ಗೊತ್ತಿದ್ಯಾ?. ಶೂಗಳೊಳಗೆ ಬೆವರು ತೇವಾಂಶ ಹೆಚ್ಚಿಸುವುದರಿಂದ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ದುರ್ವಾಸನೆ, ಫಂಗಲ್‌ ಇನ್ಫೆಕ್ಷನ್ ಮತ್ತು ಚರ್ಮದ ಸಮಸ್ಯೆಗಳು ಉಂಟಾಗುವ ಅಪಾಯವಿದೆ.

ವೈದ್ಯರ ಪ್ರಕಾರ, ಪಾದಗಳು ದೇಹದ ಹೆಚ್ಚು ಬೆವರುವ ಭಾಗಗಳಲ್ಲಿ ಒಂದಾಗಿದೆ. ಶೂಗಳನ್ನು ದಿನವಿಡೀ ಧರಿಸಿದಾಗ ಪಾದಗಳು ತೇವಾಂಶದಿಂದ ಕೂಡಿಬಿಡುತ್ತವೆ. ಸಾಕ್ಸ್ ಧರಿಸುವುದು ಈ ತೇವಾಂಶವನ್ನು ಹೀರಿಕೊಂಡು ಪಾದಗಳನ್ನು ಒಣಗಿಡುತ್ತದೆ. ಜೊತೆಗೆ ದುರ್ವಾಸನೆ ತಡೆಯಲು ಸಹಕಾರಿ. ಬೇಸಿಗೆಯಲ್ಲಿ ಸಾಕ್ಸ್ ಬೆವರು ಕಡಿಮೆ ಮಾಡಲು ನೆರವಾಗುತ್ತದೆ, ಚಳಿಗಾಲದಲ್ಲಿ ಪಾದಗಳನ್ನು ಬೆಚ್ಚಗಿರಿಸುತ್ತದೆ.

ಸಾಕ್ಸ್ ಇಲ್ಲದೆ ಶೂ ಹಾಕುವವರು ಅಲರ್ಜಿ, ಚರ್ಮದ ಉರಿಯೂತ ಮತ್ತು ಗುಳ್ಳೆಗಳ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ಸೂಕ್ಷ್ಮ ಚರ್ಮ ಹೊಂದಿರುವವರಲ್ಲಿ ಈ ತೊಂದರೆಗಳು ಗಂಭೀರವಾಗಬಹುದು ಎನ್ನುತ್ತಾರೆ ವೈದ್ಯರು.

ಆರೋಗ್ಯದ ದೃಷ್ಟಿಯಿಂದ ಶೂ ಧರಿಸುವಾಗ ಸಾಕ್ಸ್ ಹಾಕುವುದು ಅವಶ್ಯಕ. ಇದು ಕೇವಲ ಫ್ಯಾಷನ್‌ನ ವಿಷಯವಲ್ಲ, ಪಾದಗಳ ಸುರಕ್ಷತೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದೆ. ಹೀಗಾಗಿ ದುರ್ವಾಸನೆ ಮತ್ತು ಸೋಂಕುಗಳಿಂದ ತಪ್ಪಿಸಿಕೊಳ್ಳಲು ಸಾಕ್ಸ್ ಧರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.

error: Content is protected !!