March 10, 2026
Tuesday, March 10, 2026
spot_img

ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ…ನಾಲಿಗೆ ಹರಿಬಿಟ್ಟ ʻಕೈʼ ಸಂಸದೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ನಾಯಿಯೊಂದಿಗೆ (Dog) ಸಂಸತ್ ಭವನಕ್ಕೆ ಆಗಮಿಸಿದ್ದು ವಿವಾದಕ್ಕೆ ಕಾರಣವಾಯಿತು.

ಇಂದು ಬೆಳಗ್ಗೆ ಸಂಸತ್ತಿಗೆ ಹೋಗುವಾಗ ನಾಯಿಮರಿಯನ್ನು ರಕ್ಷಿಸಿದೆ ಎಂದು ಚೌಧರಿ ವಿವರಿಸಿದರು. ರಸ್ತೆಯಲ್ಲಿ ಸ್ಕೂಟರ್-ಕಾರು ಡಿಕ್ಕಿ ಹೊಡೆದಿದ್ದರಿಂದ ಗಾಯಗೊಂಡಿದ್ದ ನಾಯಿಮರಿಯನ್ನು ಗಮನಿಸಿದ ಕಾಂಗ್ರೆಸ್ ನಾಯಕಿ, ಅದನ್ನು ತಮ್ಮ ಕಾರಿನಲ್ಲಿ ಸಂಸತ್ತಿಗೆ ಕರೆ ತಂದರು. ಸ್ವಲ್ಪ ಸಮಯದ ಆ ನಾಯಿಮರಿ ಕಾಂಗ್ರೆಸ್ ಸಂಸದ ಕಾರಿನಿಂದ ಹೊರಟುಹೋಯಿತು.

ನಾನು ದಾರಿಯಲ್ಲಿ ಹೋಗುತ್ತಿದ್ದೆ. ಕಾರು ಡಿಕ್ಕಿಯಿಂದ ಗಾಯಗೊಂಡಿದ್ದ ಈ ಪುಟ್ಟ ನಾಯಿಮರಿ ರಸ್ತೆಯಲ್ಲಿ ಅಲೆದಾಡುತ್ತಿತ್ತು. ಅದು ಮತ್ತೊಂದು ವಾಹನದ ಚಕ್ರಕ್ಕೆ ಸಿಲುಕಬಹುದು ಎಂದು ನಾನು ಅದನ್ನು ಎತ್ತಿಕೊಂಡು, ಕಾರಿನಲ್ಲಿ ಇರಿಸಿ, ಸಂಸತ್ತಿಗೆ ಕರೆತಂದೆ. ಕಾರು ಹೊರಟುಹೋಯಿತು ಆದರೆ ನಾಯಿಯೂ ಹಾಗೆಯೇ ಇತ್ತು ಚೌಧರಿ ತಿಳಿಸಿದರು.

ಈ ವೇಳೆ ಆಡಳಿತ ಪಕ್ಷವನ್ನು ಟೀಕಿಸಿದ ಚೌಧರಿ, “ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ” ಮತ್ತು ಅದರ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದರು.

ಕಚ್ಚುವ ನಿಜವಾದ ನಾಯಿಗಳು ಸಂಸತ್ತಿನಲ್ಲಿ ಕುಳಿತಿವೆ. ಅವರು ಸರ್ಕಾರವನ್ನು ನಡೆಸುತ್ತಾರೆ. ನಾವು ಮೂಕ ಪ್ರಾಣಿಯನ್ನು ನೋಡಿಕೊಳ್ಳುತ್ತೇವೆ ಮತ್ತು ಇದು ದೊಡ್ಡ ವಿಷಯ ಮತ್ತು ಚರ್ಚೆಯ ವಿಷಯವಾಗಿದೆ. ಸರ್ಕಾರಕ್ಕೆ ಬೇರೆ ಕೆಲಸವಿಲ್ಲವೇ? ನಾನು ನಾಯಿಯನ್ನು ಮನೆಗೆ ಕಳುಹಿಸಿ ಮನೆಯಲ್ಲಿಯೇ ಇಟ್ಟುಕೊಳ್ಳಲು ಹೇಳಿದೆ. ಸಂಸತ್ತಿನಲ್ಲಿ ಕುಳಿತು ಪ್ರತಿದಿನ ನಮ್ಮನ್ನು ಕಚ್ಚುವವರ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !