ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 380 ಮಿ.ಮೀ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಹಲವು ಕಡೆ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಮ್ಮುವಿನಲ್ಲಿ ನಿನ್ನೆ ದಾಖಲೆಯ 380 ಮಿ.ಮೀ ಮಳೆಯಾಗಿದೆ ಎಂದು ಎಂಇಟಿ ಕಾಶ್ಮೀರ ನಿರ್ದೇಶಕ ಡಾ. ಮುಖ್ತಾರ್ ಅಹ್ಮದ್ ಅವರು ತಿಳಿಸಿದ್ದಾರೆ.
1988 ರಲ್ಲಿ ಜಮ್ಮುವಿನಲ್ಲಿ ದಾಖಲಾಗಿದ್ದ 270 ಮಿ.ಮೀ ಮಳೆಯ ಹಿಂದಿನ ದಾಖಲೆಯನ್ನು ಇದು ಮುರಿದಿದೆ. ಇದು ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ ಎಂದು ಅವರು ಹೇಳಿದ್ದಾರೆ.
ಜಮ್ಮುವಿನಲ್ಲಿ 380 ಮಿ.ಮೀ ಮಳೆ ದಾಖಲೆಯ ಮಳೆಯ ಜೊತೆಗೆ, ಕತ್ರಾದಲ್ಲಿ 284 ಮಿ.ಮೀ ಮಳೆಯಾಗಿದೆ, ನಂತರ ರಿಯಾಸಿಯಲ್ಲಿ 282 ಮಿ.ಮೀ, ಸಾಂಬಾದಲ್ಲಿ 170 ಮಿ.ಮೀ, ದಾದಾದಲ್ಲಿ 130 ಮಿ.ಮೀ, ಕಥುವಾದಲ್ಲಿ 116.5 ಮಿ.ಮೀ, ಬನಿಹಾಲ್‌ನಲ್ಲಿ 83.8 ಮಿ.ಮೀ, ರಾಜೌರಿಯಲ್ಲಿ 57.4 ಮಿ.ಮೀ ಹಾಗೂ ಕಿಶ್ತ್ವಾರ್‌ನಲ್ಲಿ 49 ಮಿ.ಮೀ ಮಳೆಯಾಗಿದೆ.
ನಿರಂತರ ಭಾರೀ ಮಳೆಯಿಂದಾಗಿ ಜಮ್ಮುವಿನಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ತಗ್ಗು ಪ್ರದೇಶದ ಮನೆಗಳು ನೀರಿನಲ್ಲಿ ಮುಳುಗಿವೆ ಮತ್ತು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.