Thursday, October 9, 2025

ಒಂದೇ ಗೇಮ್ ನಿಂದ ಘಟಾನುಘಟಿ ಆಟಗಾರರ ರೆಕಾರ್ಡ್ ಬ್ರೇಕ್: ಟಿ20 Rank ಪಟ್ಟಿಯಲ್ಲಿ World Record

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್‌ನಲ್ಲಿ ಸಿಕ್ಸ್‌, ಬೌಂಡರಿ ಹೊಡೆದು ಸದ್ದು ಮಾಡಿದ ಅಭಿಷೇಕ್‌ ಶರ್ಮಾ ಐಸಿಸಿ ಟಿ20 ರ್ಯಾಂಕ್ ಪಟ್ಟಿಯಲ್ಲಿ ವಿಶ್ವದಾಖಲೆ ಮಾಡಿದ್ದಾರೆ. 25 ವರ್ಷದ ಅಭಿಷೇಕ್‌ ಶರ್ಮಾ ಮೊದಲ ಸ್ಥಾನ ಪಡೆದಿದ್ದು ಅಲ್ಲದೇ 926 ರೇಟಿಂಗ್‌ ಪಾಯಿಂಟ್‌ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಇಲ್ಲಿಯವರೆಗೆ 2020 ರಲ್ಲಿ ಇಂಗ್ಲೆಂಡಿನ ಡೇವಿಡ್‌ ಮಲಾನ್‌ 919 ರೇಟಿಂಗ್‌ ಪಾಯಿಂಟ್‌ ಪಡೆದಿದ್ದು ಇದೂವರೆಗಿನ ದಾಖಲೆಯಾಗಿತ್ತು. ಆದರೆ ಏಷ್ಯಾ ಕಪ್‌ನ 7 ಪಂದ್ಯಗಳಿಂದ 314 ರನ್‌ ಸಿಡಿಸಿದ್ದರಿಂದ ವಿಶ್ವದಾಖಲೆ ನಿರ್ಮಾಣವಾಗಿದೆ.

ವಿರಾಟ್‌ ಕೊಹ್ಲಿ ಈ ಹಿಂದೆ 909 ರೇಟಿಂಗ್‌ ಪಾಯಿಂಟ್‌ ಪಡೆದಿದ್ದರು. ಇದು ಈವರೆಗಿನ ಭಾರತೀಯ ಬ್ಯಾಟರ್‌ನ ಅತ್ಯುತ್ತಮ ರೇಟಿಂಗ್‌ ಪಾಯಿಂಟ್‌ ಆಗಿತ್ತು. ಆದರೆ ಈಗ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್‌ ಶರ್ಮಾ ಮುರಿದಿದ್ದಾರೆ.

error: Content is protected !!