ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವಾರದ ಆರಂಭದಲ್ಲಿ ಪತ್ತೆಯಾದ ಅಂತರರಾಜ್ಯ ‘ವೈಟ್ ಕಾಲರ್’ ಭಯೋತ್ಪಾದಕ ಮಾಡ್ಯೂಲ್‌ಗೆ ಸಂಬಂಧಿಸಿದಂತೆ ಖಾಜಿಗುಂಡ್ ಮೂಲದ ಡಾ. ಮುಜಾಫರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂಟರ್‌ಪೋಲ್ ಅನ್ನು ಸಂಪರ್ಕಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೂವರು ವೈದ್ಯರು ಸೇರಿದಂತೆ ಎಂಟು ಜನರಲ್ಲಿ ಮುಜಾಫರ್ ಡಾ. ಅದೀಲ್ ಸಹೋದರ. ಬಂಧಿತ ಎಂಟು ಜನರಲ್ಲಿ ಏಳು ಮಂದಿ ಕಾಶ್ಮೀರದವರು.
ಬಂಧಿತರ ವಿಚಾರಣೆ ವೇಳೆ ಡಾ. ಮುಜಾಫರ್ ಅವರ ಹೆಸರು ಬೆಳಕಿಗೆ ಬಂದಿದ್ದು, ಅವರು 2021ರಲ್ಲಿ ಟರ್ಕಿಗೆ ತೆರಳಿದ್ದ ವೈದ್ಯರ ತಂಡದ ಭಾಗವಾಗಿದ್ದರು ಎಂದು ತಿಳಿದುಬಂದಿದೆ. ಆ ತಂಡದಲ್ಲಿ ಮುಜಮ್ಮಿಲ್ ಗಣಾಯಿ ಮತ್ತು ಉಮರ್ ನಬಿ ಕೂಡ ಇದ್ದರು. ಉಮರ್ ನಬಿಯೇ ಸ್ಫೋಟಕಗಳಿಂದ ತುಂಬಿದ್ದ ಕಾರನ್ನು ಚಾಲನೆ ಮಾಡಿದ್ದಾನೆ. ಉಮರ್ ನಬಿ ನೊಂದಿಗೆ ಮುಜಾಫರ್ ಕೂಡ ಇದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

