Saturday, January 10, 2026

ಗ್ರಾಹಕರ ಮೊಗದಲ್ಲಿ ಮಂದಹಾಸ ತಂದ ‘ಕೆಂಪು ರಾಣಿ’ ಆದರೆ ರೈತರಿಗೆ ಬೇಸರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೊಮ್ಯಾಟೊ ಮತ್ತೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಭಾರೀ ಏರಿಕೆ ಕಂಡಿದ್ದ ಟೊಮ್ಯಾಟೊ ರೈತರ ಮುಖದಲ್ಲಿ ಮಂದಹಾಸ ಬೀರಿತ್ತು. ಆದರೆ ಇದೀಗ ಮತ್ತೆ ರೈತರಿಗೆ ಸಂಕಷ್ಟ ತಂದಿದೆ.

ಚಿಕ್ಕಬಳ್ಳಾಪುರ, ಕೋಲಾರ ಅವಳಿ ಜಿಲ್ಲೆಗಳ ರೈತರು ಕೊರೆಯುವ ಚಳಿಯಲ್ಲೂ ಯಥೇಚ್ಛವಾಗಿ ಟೊಮ್ಯಾಟೊ ಬೆಳೆ ಬೆಳೆದಿದ್ದಾರೆ. ಇದರಿಂದ ಒಳ್ಳೆಯ ಫಸಲು ಕೂಡ ಪಡೆದಿದ್ದರು. ಆದರೆ ಇದೀಗ ಚಿಕ್ಕಬಳ್ಳಾಪುರದ ಎ.ಪಿ.ಎಂ.ಸಿ ಟೊಮ್ಯಾಟೊ ಮಾರುಕಟ್ಟೆಯಲ್ಲಿ 15 ಕೆ.ಜಿ ಕ್ರೇಟ್ 250 ರೂಪಾಯಿಯಿಂದ ಆರು ನೂರು ರೂಪಾಯಿಗೆ ಮಾತ್ರ ಮಾರಾಟವಾಗಿದೆ.

ಇನ್ನೂ ಒಂದು ಎಕರೆ ಟೊಮೇಟೊ ಬೆಳೆಯಲು 50 ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಆಗುತ್ತೆ. ಟೊಮ್ಯಾಟೊ ನಾರು ಖರೀದಿ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಾಟ, ಉಳುಮೆ ಅಂತ ರೈತರು ಸಾಲ ಮಾಡಿ ತೋಟ ಮಾಡುತ್ತಾರೆ. ಆದ್ರೆ ಈಗ ಮತ್ತೆ ಟೊಮ್ಯಾಟೊ ಹಣ್ಣಿಗೆ ಬೆಲೆ ಕಡಿಮೆಯಾಗಿದೆ. ಮತ್ತೊಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿ ಟೊಮ್ಯಾಟೊ ಬೆಳೆ ಆರಂಭ ಮಾಡಿದ್ದೆ ಚಿಕ್ಕಬಳ್ಳಾಪುರದಲ್ಲಿ ಟೊಮ್ಯಾಟೊ ಹಣ್ಣಿನ ಬೆಲೆ ಕುಸಿತವಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಕಷ್ಟ ಪಟ್ಟು ಬೆಳೆದ ಟೊಮ್ಯಾಟೊ ಗೆ ಬೆಲೆ ಕಡಿಮೆಯಾದ ಕಾರಣ, ಬೇಸರ ವ್ಯಕ್ತಪಡಿಸಿರುವ ರೈತರ, ತೋಟಗಳ ಕಡೆ ಗಮನ ಕಡಿಮೆ ಮಾಡಿದ್ದಾರೆ. ಕಳೆದ ವಾರವಷ್ಟೇ 15 ಕೆಜಿಯ ಒಂದು ಬಾಕ್ಸ್‌ಗೆ 600 ರೂ. – 800 ರೂ. ರಷ್ಟಿದ್ದ ಬೆಲೆ, ಈಗ ಕೆಲವು ಕಡೆ 150 ರೂ. – 250 ರೂ. ಕ್ಕೆ ಇಳಿದಿದೆ. ರೈತರಿಗೆ ಸಿಗುವ ಬೆಲೆ ಕಡಿಮೆ ಇದ್ದರೂ, ಬೆಂಗಳೂರಿನಂತಹ ನಗರಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಇನ್ನೂ ಕೆಜಿಗೆ 30 ರೂ. – 50 ರೂ. ದರದಲ್ಲಿ ಮಾರಾಟವಾಗುತ್ತಿದೆ.

error: Content is protected !!