ಹೊಸದಾಗಿ ಮದುವೆಯಾದ ಕ್ಷಣದಲ್ಲಿ ಕನಸುಗಳು ಜಾಸ್ತಿ, ನಿರೀಕ್ಷೆಗಳು ಇನ್ನೂ ಜಾಸ್ತಿ. ಆದರೆ ಆ ನಿರೀಕ್ಷೆಗಳು ನಿಜ ಜೀವನದ ವಾಸ್ತವಕ್ಕೆ ಸ್ವಲ್ಪ ದೂರವಿದ್ದರೂ, ಅಲ್ಲಿ ಅಸಮಾಧಾನ ಆರಂಭವಾಗುತ್ತದೆ. ಇದೇ ಸಣ್ಣ ಅಸಮಾಧಾನಗಳು ಮಾತು ಕಡಿಮೆ ಮಾಡುತ್ತವೆ, ಜಗಳ ಹುಟ್ಟಿಸುತ್ತವೆ ಮತ್ತು ಕೊನೆಗೆ ಸಂಬಂಧದಲ್ಲೇ ಬಿರುಕು ಮೂಡಿಸುತ್ತವೆ. ಅನೇಕರಿಗೆ ಮದುವೆಯಾಗಿ ಕೆಲ ತಿಂಗಳು ಅಥವಾ ವರ್ಷಗಳಲ್ಲೇ ವಿಚ್ಛೇದನದ ಯೋಚನೆ ಬರುವುದು ಇದರ ಪರಿಣಾಮವೇ. ಆದರೆ ಕೆಲವು ಅಂಶಗಳನ್ನು ಗಮನಿಸಿದರೆ, ಈ ಸಂಬಂಧವನ್ನು ಸುಂದರವಾಗಿ ಬೆಳೆಸಬಹುದು.
ಗಂಡ-ಹೆಂಡತಿಯ ನಡುವೆ ಮುಚ್ಚುಮರೆ ಇರಬಾರದು. ದಿನಕ್ಕೆ ಸ್ವಲ್ಪ ಸಮಯ ಮನಸ್ಸು ಬಿಚ್ಚಿ ಮಾತನಾಡುವುದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ.
ಗೌರವ ಮತ್ತು ಅರ್ಥಮಾಡಿಕೊಳ್ಳುವುದು ತುಂಬಾನೇ ಮುಖ್ಯ. ಇಬ್ಬರ ಅಭಿಪ್ರಾಯ ಒಂದೇ ಆಗಬೇಕೆಂದಿಲ್ಲ. ಆದರೆ ಭಿನ್ನಾಭಿಪ್ರಾಯಕ್ಕೂ ಗೌರವ ಇರಬೇಕು.
ಪ್ರೀತಿ ಮಾತ್ರವಲ್ಲ, ಸ್ನೇಹವೂ ಸಂಬಂಧದ ಬೆನ್ನೆಲುಬು. ಕಷ್ಟದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಬೇಕು.
ಇತರರ ಜೀವನದ ಹೋಲಿಕೆಗಳಿಂದ ಅಸಮಾಧಾನ ಮಾಡಿಕೊಳ್ಳಬೇಡಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬದುಕುವುದು ಶಾಂತಿಗೆ ಕಾರಣ.
ಇದನ್ನೂ ಓದಿ: Viral | ಮಗಳಿಗಾಗಿ ಇಡ್ಲಿ, ದೋಸೆ ಹಿಟ್ಟು ಮಾರುತ್ತಿರೋ ಅಪ್ಪ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪರಿಶ್ರಮದ ಕಥೆ
ಸಂಗಾತಿಯ ಮಾತುಗಳನ್ನು ಗಮನದಿಂದ ಕೇಳಿದರೆ, ಅವರು ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ಅಲ್ಲಿಗೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ.
ಸಂಬಂಧಕ್ಕಾಗಿ ನಿಮ್ಮ ಸ್ವಭಾವವನ್ನು ಕಳೆದುಕೊಳ್ಳಬೇಡಿ. ನೀವು ನೀವಾಗಿರಿ.
ಸಂಬಂಧ ಗಟ್ಟಿಯಾಗಲು ಸಮಯ ಬೇಕು. ಆತುರದ ನಿರ್ಧಾರಗಳು ದೂರವನ್ನು ಮಾತ್ರ ಹೆಚ್ಚಿಸುತ್ತವೆ. ಸಂಬಂಧದಲ್ಲಿ ತಾಳ್ಮೆ ಇರಲಿ.

