ಇಂದಿನ ದಿನಗಳಲ್ಲಿ ನಿಜವಾದ ಪ್ರೀತಿಗೆ ಬೆಲೆ ಕಡಿಮೆಯಾಗಿ ಹಣ, ಸೌಂದರ್ಯ ಮತ್ತು ಸ್ಥಾನಮಾನಕ್ಕೆ ಹೆಚ್ಚಿನ ಮಹತ್ವ ದೊರೆತಿದೆ. ಅನೇಕರು ನಿಜವಾದ ಭಾವನೆಗಳನ್ನು ಬಿಟ್ಟು ಸ್ವಾರ್ಥದ ಪ್ರೀತಿಯಲ್ಲಿ ಮುಳುಗುತ್ತಿದ್ದಾರೆ. ಇಂತಹ ಸಂಬಂಧಗಳಲ್ಲಿ ನೋವು, ಮೋಸ ಮತ್ತು ನಿರಾಶೆಯ ಘಟನೆಗಳು ಹೆಚ್ಚಾಗುತ್ತಿವೆ. ಪ್ರೀತಿ ಎಂದರೆ ಕೇವಲ ಮಾತಲ್ಲ, ಅದು ನಿಷ್ಠೆ ಮತ್ತು ವಿಶ್ವಾಸದ ಪರೀಕ್ಷೆ. ಹೀಗಾಗಿ ಸಂಬಂಧದ ಪ್ರಾರಂಭದಲ್ಲೇ ಕೆಲವು ಲಕ್ಷಣಗಳನ್ನು ಗುರುತಿಸಿದರೆ, ಮುಂದಿನ ನೋವುಗಳಿಂದ ತಪ್ಪಿಸಿಕೊಳ್ಳಬಹುದು.
- ಮಾತಿನ ಅಂತರ: ಮೊದಲು ಗಂಟೆಗಟ್ಟಲೆ ಮಾತನಾಡುತ್ತಿದ್ದ ಗೆಳತಿ ಈಗ ಕರೆಗಳಿಗೆ ಅಥವಾ ಮೆಸೇಜ್‌ಗಳಿಗೆ ಪ್ರತಿಕ್ರಿಯೆ ನೀಡದೆ ದೂರವಾಗುತ್ತಿದ್ದಾಳೆ ಎಂದರೆ ಹುಷಾರ್!. ಇದು ಮನಸ್ಸು ಬೇರೆಯ ಕಡೆ ತಿರುಗಿರುವ ಸೂಚನೆ.
- ಭಾವನಾತ್ಮಕ ದೂರ: ಮೊದಲಿನಂತೆ ಪ್ರೀತಿಯ ಸ್ಪರ್ಶ, ಕಾಳಜಿ ಕಾಣದಿದ್ದರೆ ಅದು ಸಂಬಂಧದ ಉಷ್ಣತೆ ಕಡಿಮೆಯಾಗುತ್ತಿರುವ ಸೂಚನೆ. ನೀವು ಇದ್ದರೂ ಅವಳ ಮನಸ್ಸು ಬೇರೆಡೆ ಇರಬಹುದು.
- ಆದ್ಯತೆಯ ಬದಲಾವಣೆ: ಮೊದಲು ನೀವೇ ಅವಳ ಪ್ರಪಂಚವಾಗಿದ್ದರೆ, ಈಗ ನೀವು ಪಕ್ಕಕ್ಕೆ ಸರಿದು ಬೇರೆ ವ್ಯಕ್ತಿಗೆ ಮಹತ್ವ ನೀಡುತ್ತಿದ್ದರೆ, ಅದು ಸ್ಪಷ್ಟ ಎಚ್ಚರಿಕೆಯ ಲಕ್ಷಣ.
- ಸಣ್ಣ ಜಗಳ, ದೊಡ್ಡ ನಿರ್ಧಾರ: ಸಣ್ಣ ವಿಷಯಕ್ಕೂ ಬ್ರೇಕಪ್ ಹೇಳುವುದು ಅಥವಾ ಸಾಕಾಗಿಹೋಗಿದೆ ಅನ್ನುವಂತೆ ವರ್ತಿಸುವುದು ಸಹ ಮನಸ್ಸು ಬೇರೆಡೆ ತಿರುಗಿದೆ ಎಂಬ ಸೂಚನೆ.
ಇಂತಹ ಸಂದರ್ಭದಲ್ಲಿ ನಿಶ್ಚಲವಾಗಿ ಯೋಚಿಸಿ, ಮನದಾಳದ ಸಂಭಾಷಣೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ. ನಿಷ್ಠೆಯಿಲ್ಲದ ಪ್ರೀತಿಗಿಂತ ಒಂಟಿತನವೇ ಉತ್ತಮ ಎಂಬುದನ್ನು ನೆನಪಿನಲ್ಲಿಡಿ.

