ಸಾಮಾನ್ಯವಾಗಿ ಸುಳ್ಳು ಎಂಬ ಪದ ಕೇಳಿದರೆ ಅದು ಸಂಬಂಧಗಳಲ್ಲಿ ಬಿರುಕು ಮೂಡಿಸುವುದೆಂದು ಭಾವಿಸಲಾಗುತ್ತದೆ. ಆದರೆ ಎಲ್ಲ ಸುಳ್ಳುಗಳೂ ಹಾನಿಕಾರಕವಲ್ಲ. ಕೆಲವು ಸಂದರ್ಭಗಳಲ್ಲಿ ಹೇಳುವ ಸಣ್ಣಪುಟ್ಟ ಸುಳ್ಳುಗಳು ದಾಂಪತ್ಯ ಜೀವನದಲ್ಲೇ ಅಲ್ಲ, ಸ್ನೇಹ ಹಾಗೂ ಕುಟುಂಬ ಸಂಬಂಧಗಳಲ್ಲೂ ಸಹ ಪ್ರೀತಿ, ವಿಶ್ವಾಸ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಬಲಪಡಿಸುತ್ತವೆ.
ಹೊಗಳಿಕೆಯ ಸುಳ್ಳು – ಸಂಗಾತಿಯ ಹೊಸ ಹೇರ್‌ಸ್ಟೈಲ್ ಅಥವಾ ರೆಸಿಪಿ ಇಷ್ಟವಾಗದಿದ್ದರೂ ಮೆಚ್ಚುಗೆಯ ಮಾತು ಹೇಳುವುದರಿಂದ ಸಂತೋಷ ಹೆಚ್ಚುತ್ತದೆ.

ಆಹಾರದ ರುಚಿಗಿಂತ ಪ್ರೀತಿ – ಆಹಾರದಲ್ಲಿ ಕೊರತೆಯಿದ್ದರೂ “ಅದ್ಭುತವಾಗಿದೆ” ಎಂದು ಹೊಗಳುವುದು ಸಂಬಂಧದಲ್ಲಿ ಮಧುರತೆ ತರುತ್ತದೆ.
ಮಿಸ್ ಯು ಹೇಳುವುದು – ಪ್ರತೀ ಕ್ಷಣ ಮಿಸ್ ಮಾಡದೇ ಇದ್ದರೂ, ಕೆಲವೊಮ್ಮೆ “ಮಿಸ್ ಯು” ಹೇಳುವುದರಿಂದ ಭಾವನಾತ್ಮಕ ಬಾಂಧವ್ಯ ಗಾಢವಾಗುತ್ತದೆ.
ಉಡುಗೊರೆಯ ಶ್ಲಾಘನೆ – ಉಡುಗೊರೆ ಇಷ್ಟವಾಗದಿದ್ದರೂ ಅದನ್ನು ಮೆಚ್ಚಿಕೊಳ್ಳುವುದರಿಂದ ಇನ್ನೊಬ್ಬರ ಹೃದಯ ಗೆಲ್ಲಬಹುದು.

ಮನೋಸ್ಥೈರ್ಯ ತುಂಬುವ ಸುಳ್ಳು – “ನೀವು ಎಲ್ಲವನ್ನೂ ಚೆನ್ನಾಗಿ ನಿರ್ವಹಿಸುತ್ತೀರಿ” ಎಂಬ ಮಾತು ಒತ್ತಡದಲ್ಲಿರುವವರಿಗೆ ಹೊಸ ಶಕ್ತಿ ನೀಡುತ್ತದೆ.
ಪರಿಸ್ಥಿತಿಯನ್ನು ನಿಭಾಯಿಸುವ ಸುಳ್ಳು – ಪಾರ್ಟಿಗೆ ತಡವಾಗಿ ಬಂದ ಸ್ನೇಹಿತನನ್ನು ಮುಜುಗರ ತಪ್ಪಿಸಲು “ನಾವು ಈಗಷ್ಟೇ ಬಂದೆವು” ಎಂಬ ಮಾತು ಸಹಾಯಕ.
ಭವಿಷ್ಯದ ಭರವಸೆ – ಕೆಲಸ ಅಥವಾ ಜೀವನದ ಸಮಸ್ಯೆಗಳಾಗಿದ್ದರೂ, “ನೀವು ಬೇಗನೆ ಉತ್ತಮ ಅವಕಾಶ ಪಡೆಯುತ್ತೀರಿ” ಎಂದು ಹೇಳುವುದರಿಂದ ಆಶಾಭರವಸೆ ಹೆಚ್ಚುತ್ತದೆ.
