January15, 2026
Thursday, January 15, 2026
spot_img

Relationship| ಇತ್ತೀಚಿನ ದಿನಗಳಲ್ಲಿ live in ಸಂಬಂಧಗಳು ಹೆಚ್ಚಾಗೋಕೆ ಕಾರಣ ಏನು?

ಇಂದಿನ ಯುವಜನತೆ ಜೀವನವನ್ನು ನೋಡೋ ದೃಷ್ಟಿ ಸಂಪೂರ್ಣ ಬದಲಾಗಿದೆ. ಹಿಂದೊಮ್ಮೆ ಗಂಡು–ಹೆಣ್ಣು ಒಂದೇ ಮನೆಯಲ್ಲಿ ವಾಸಿಸಲು ಮದುವೆ ಎನ್ನುವುದು ಮೊದಲ ಷರತ್ತು. ಆದರೆ ಇಂದಿನ ಟ್ರೆಂಡ್‌ ನೋಡಿದರೆ, ಲಿವ್–ಇನ್ ಸಂಬಂಧಗಳು ಕಾಲೇಜು ಓದುಗರಿಂದ ಹಿಡಿದು ಉದ್ಯೋಗದಲ್ಲಿರುವ ಯುವಕರೊಳಗೆ ವೇಗವಾಗಿ ಹರಡುತ್ತಿದೆ. ತಮ್ಮದೇ ಆದ ನಿಯಮ, ಸ್ವಾತಂತ್ರ್ಯ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಈ ಹೊಸ ಜೀವನಶೈಲಿಗೆ ಪ್ರಮುಖ ಕಾರಣಗಳಾಗಿ ಪರಿಣಮಿಸಿವೆ.

ಲಿವ್–ಇನ್ ಸಂಬಂಧದಲ್ಲಿ ಇರುವ ಜೋಡಿಗಳು ಪರಸ್ಪರರ ನಡವಳಿಕೆ, ಜೀವನಶೈಲಿ, ಜವಾಬ್ದಾರಿಗಳನ್ನು ಹಂಚಿಕೊಳ್ಳುವ ರೀತಿ ಮತ್ತು ಒಟ್ಟಿಗೆ ಜೀವನ ಸಾಗಿಸುವ ಸಾಮರ್ಥ್ಯವನ್ನು ನೇರವಾಗಿ ಅನುಭವಿಸುತ್ತಾರೆ. ಮದುವೆಯ ಮೊದಲು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುವ ಸುಲಭವಾದ ಮಾರ್ಗವೆಂದು ಕೆಲವರು ಇದನ್ನು ನೋಡಿ ಅನುಸರಿಸುತ್ತಿದ್ದಾರೆ. ಆರ್ಥಿಕವಾಗಿ ಸ್ವತಂತ್ರರಾಗಿರುವ ಯುವಕರಲ್ಲಿ ಇದು ಸಾಮಾನ್ಯ ಮಾತಾಗಿದೆ. ಆದರೆ ಈ ಸ್ವಾತಂತ್ರ್ಯದ ಹಿಂದೆ ಅನೇಕ ಸವಾಲುಗಳೂ ಇವೆ.

ಲಿವ್–ಇನ್ ಸಂಬಂಧಗಳಲ್ಲಿ ಕಾನೂನು ರಕ್ಷಣೆಯ ಕೊರತೆ ಒಂದು ಪ್ರಮುಖ ಸಮಸ್ಯೆ. ಮದುವೆಯಷ್ಟು ಬಲವಾದ ಕಾನೂನು ಬದ್ಧತೆ ಇಲ್ಲದಿರುವುದರಿಂದ ಬೇರ್ಪಡುವ ಸಂದರ್ಭಗಳಲ್ಲಿ ಆಸ್ತಿ ಹಂಚಿಕೆ, ಜವಾಬ್ದಾರಿ, ಮಕ್ಕಳ ಪಾಲನೆ–ಪೋಷಣೆ ಮೊದಲಾದ ವಿಷಯಗಳಲ್ಲಿ ಗೊಂದಲ ಎದುರಾಗಬಹುದು. ಇದಕ್ಕಿಂತ ಹೊರತು, ಸಮಾಜದಲ್ಲಿ ಇನ್ನೂ ಈ ಸಂಬಂಧಗಳು ಎಲ್ಲೆಡೆ ಸ್ವೀಕಾರಾರ್ಹವಾಗಿಲ್ಲ. ಕೆಲವು ಕುಟುಂಬಗಳು ಮತ್ತು ಸಮಾಜದ ಒಂದು ಭಾಗ ಇದನ್ನು ನಕಾರಾತ್ಮಕವಾಗಿ ನೋಡುತ್ತದೆ.

ಭವಿಷ್ಯದ ಬಗ್ಗೆ ಭರವಸೆ ಇಲ್ಲದ ಅನುಮಾನವೂ ಕೆಲ ಜೋಡಿಗಳಲ್ಲಿ ಭಾವನಾತ್ಮಕ ಒತ್ತಡವನ್ನುಂಟುಮಾಡುತ್ತದೆ. ಆದರೂ, ಇಂದಿನ ಯುವಕರು ತಮ್ಮ ಆಯ್ಕೆಯನ್ನು, ವೈಯಕ್ತಿಕ ಸ್ವಾತಂತ್ರ್ಯವನ್ನು ಮತ್ತು ಸರಿಯಾದ ಜೀವನ ಸಂಗಾತಿಯನ್ನು ಹುಡುಕುವ ಪ್ರಯತ್ನವನ್ನು ಲಿವ್–ಇನ್ ಸಂಬಂಧಗಳ ಮೂಲಕ ಮುಂದುವರೆಸುತ್ತಿದ್ದಾರೆ. ಮದುವೆಗೂ ಮೊದಲು ಒಬ್ಬರನ್ನೊಬ್ಬರು ನಿಜವಾಗಿ ಅರ್ಥಮಾಡಿಕೊಳ್ಳಲು ಬಯಸುವವರಿಗೆ, ಇದು ಹೊಸ ಯುಗದ ಜೀವನಶೈಲಿಯಂತೆ ಕಂಡುಬರುತ್ತಿದೆ.

Most Read

error: Content is protected !!