Monday, December 8, 2025

ಕೇಂದ್ರ ಸರಕಾರದಿಂದ ಗೌರವ…ಆದರೆ ಬಂಗಾಳ ಸರ್ಕಾರದಿಂದ ನಿರ್ಲಕ್ಸ್ಯ: ಬಂಕಿಮ್ ಚಂದ್ರ ಚಟರ್ಜಿ ಮರಿಮೊಮ್ಮಗ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನಲ್ಲಿ 150 ವರ್ಷಗಳಷ್ಟು ಹಳೆಯದಾದ ʼವಂದೇ ಮಾತರಂʼ ಹಾಡಿನ ಕುರಿತು ಚರ್ಚೆ ನಡೆಯುತ್ತಿದ್ದು, ಆದ್ರೆ ‘ವಂದೇ ಮಾತರಂ’ ಹಾಡನ್ನು ಬರೆದ ಬಂಕಿಮ್ ಚಂದ್ರ ಚಟರ್ಜಿ ಅವರನ್ನು ಬಂಗಾಳ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಬಂಕಿಮ್ ಚಂದ್ರ ಚಟರ್ಜಿ ಅವರ ಮರಿಮೊಮ್ಮಗ ಸಜಲ್ ಚಟರ್ಜಿ ಹೇಳಿದ್ದಾರೆ.

ಬಂಕಿಮ್ ಚಂದ್ರ ಚಟರ್ಜಿ ಒಂದು ಪ್ರಖ್ಯಾತ ಹೆಸರು. ಅವರು ಬ್ರಿಟಿಷರನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಆದರೆ ಹಿಂದಿನ ಭಾರತ ಸರ್ಕಾರ ಅವರನ್ನು ಮತ್ತು ಅವರ ಪರಂಪರೆಯನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಿತು. ಅವರನ್ನು ರಾಜಕೀಯವಾಗಿ ಬಳಸಲಾಗುತ್ತದೆ. ಆದ್ರೆ ಕೇಂದ್ರ ಸರ್ಕಾರ ಬಂಕಿಮ್ ಚಟರ್ಜಿ ಅವರನ್ನು ಗೌರವಿಸುತ್ತದೆ. ಬಂಗಾಳ ಸರ್ಕಾರ ಅವರನ್ನು ನಿರ್ಲಕ್ಷಿಸುತ್ತದೆ ಎಂದು ಚಟರ್ಜಿ ಹೇಳಿದರು.

ಕೇಂದ್ರವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಲಹೆಗಳನ್ನು ಪಡೆಯುತ್ತಿದೆ ಎಂದು ಹೇಳಿದರು. 2018ರಲ್ಲಿ ಅಮಿತ್ ಶಾ ನಮ್ಮ ಕುಟುಂಬವನ್ನು ಕೋಲ್ಕತ್ತಾದಲ್ಲಿ ಭೇಟಿಯಾದರು. ಆಗ ಚುನಾವಣೆ ಇರಲಿಲ್ಲ. ರಾಜ್ಯ ಸರ್ಕಾರದ ಮನಸ್ಥಿತಿ ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ದೂರಿದರು.

ತಮ್ಮ ಕುಟುಂಬವು ಒಂದೆರಡು ಬೇಡಿಕೆಗಳನ್ನು ಹೊಂದಿದೆ. ಬಂಕಿಮ ಚಟರ್ಜಿ ಅವರ ಪರಂಪರೆಯನ್ನು ಎತ್ತಿಹಿಡಿಯಲು ಒಂದು ವಿಶ್ವವಿದ್ಯಾಲಯವನ್ನು ನಿರ್ಮಿಸಬೇಕೆಂದು ನಾವು ಬಯಸುತ್ತೇವೆ. ಸಂಸತ್ತಿನಲ್ಲಿ, ರಾಷ್ಟ್ರಗೀತೆ ʼಜನ ಗಣ ಮನʼವನ್ನು ಗಾಯನದ ಮೂಲಕ ನುಡಿಸಲಾಗುತ್ತದೆ. ನಂತರ ಕೊನೆಯಲ್ಲಿ ʼವಂದೇ ಮಾತರಂʼ ವಾದ್ಯಗಳ ಮೂಲಕ ನುಡಿಸಲಾಗುತ್ತದೆ. ಅದನ್ನು ಗಾಯನದ ಮೂಲಕವೂ ನುಡಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.

ಕಳೆದ ತಿಂಗಳು ಫೈಜಾಬಾದ್‌ನಲ್ಲಿ ನಡೆದ 1937ರ ಪಕ್ಷದ ಅಧಿವೇಶನದಲ್ಲಿ ʼವಂದೇ ಮಾತರಂʼನ ಪ್ರಮುಖ ಚರಣಗಳನ್ನು ಕಾಂಗ್ರೆಸ್ ಕೈಬಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದಾಗ ರಾಜಕೀಯ ವಿವಾದ ಭುಗಿಲೆದ್ದಿತು. ಇಂತಹ ನಿರ್ಧಾರಗಳು ವಿಭಜನೆಯ ಬೀಜಗಳನ್ನು ಬಿತ್ತಿದವು ಮತ್ತು ರಾಷ್ಟ್ರಗೀತೆಯನ್ನು ತುಂಡುಗಳಾಗಿ ವಿಭಜಿಸಿದವು ಎಂದು ಅವರು ಹೇಳಿದರು.

ಕಾಂಗ್ರೆಸ್, ಈ ನಿರ್ಧಾರವನ್ನು ರವೀಂದ್ರನಾಥ್ ಠಾಗೋರ್ ಅವರ ಸಲಹೆಯ ಮೇರೆಗೆ ಕೈಗೊಂಡಿದ್ದು, ಬೇರೆ ಸಮುದಾಯ ಮತ್ತು ಧರ್ಮದ ಸದಸ್ಯರ ಭಾವನೆಗಳನ್ನು ಗೌರವಿಸುವ ಪ್ರಯತ್ನವಿತ್ತು ಎಂದು ಹೇಳಿದೆ. ಜತೆಗೆ ಕಾಂಗ್ರೆಸ್, ಬಿಜೆಪಿಯಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತು. ಆಡಳಿತ ಪಕ್ಷವು ರಾಷ್ಟ್ರೀಯ ಗೀತೆಯ ಕುರಿತು ಹೇಳಿಕೆ ನೀಡಿದ್ದ 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮತ್ತು ರವೀಂದ್ರನಾಥ ಠಾಗೋರ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿತು.

error: Content is protected !!