ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ಯುರೋಪಿಯನ್ ಯೂನಿಯನ್ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವು ಫ್ಯಾಷನ್, ಲೈಫ್‌ಸ್ಟೈಲ್ ಹಾಗೂ ಆಹಾರ ಬ್ರಾಂಡ್‌ಗಳಿಗೆ ವೆಚ್ಚ ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ. ಇದರಿಂದ ಭಾರತಕ್ಕೆ ಹೆಚ್ಚು ಅಂತಾರಾಷ್ಟ್ರೀಯ ಬ್ರಾಂಡ್‌ಗಳು ಪ್ರವೇಶಿಸುವ ಸಾಧ್ಯತೆ ಇದ್ದರೂ, ದೇಶೀಯ ಕಾಸ್ಮೆಟಿಕ್ಸ್, ಮದ್ಯ ಹಾಗೂ ಪ್ರೀಮಿಯಂ ಆಹಾರ ವಲಯದಲ್ಲಿ ಸ್ಪರ್ಧೆ ತೀವ್ರಗೊಳ್ಳಲಿದೆ ಎಂದು ರಿಟೇಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆ, ಯೂನಿಯನ್ ಬಜೆಟ್ 2026 ರಲ್ಲಿ ತೆರಿಗೆ, ಡ್ಯೂಟಿ ಹಾಗೂ ಪ್ರೋತ್ಸಾಹ ಧನಗಳನ್ನು ಸಮತೋಲನಗೊಳಿಸಿ ವ್ಯವಹಾರ ಸುಲಭಗೊಳಿಸಬೇಕೆಂಬ ನಿರೀಕ್ಷೆಯನ್ನು ರಿಟೇಲ್ ಕ್ಷೇತ್ರ ವ್ಯಕ್ತಪಡಿಸಿದೆ. ಗ್ರಾಹಕ ಖರ್ಚು ಹೆಚ್ಚಿಸುವುದು ಹಾಗೂ ಆರ್ಥಿಕ ಸಮತೋಲನಕ್ಕೆ ಹಾನಿಯಾಗದಂತೆ ಸಣ್ಣ ನಗರಗಳತ್ತ ವಿಸ್ತರಣೆ ಸಾಧ್ಯವಾಗುವಂತಹ ನೀತಿಗಳು ಬೇಕಾಗಬಹುದು.
ಇದನ್ನೂ ಓದಿ:
ಮೆಟ್ರೋ, ಹೆದ್ದಾರಿ, ವಿಮಾನ ನಿಲ್ದಾಣ ಹಾಗೂ ಪ್ರಾದೇಶಿಕ ರೈಲು ಜಾಲದ ಮೇಲಿನ ಹೂಡಿಕೆ ಮುಂದುವರಿದರೆ, ಹೊಸ ನಗರಗಳಲ್ಲಿ ಹೊಸ ಶಾಪಿಂಗ್ ಸೆಂಟರ್‌ಗಳಿಗೆ ದಾರಿ ತೆರೆದುಕೊಳ್ಳಲಿದೆ. ಉತ್ತಮ ಸಂಪರ್ಕ ವ್ಯವಸ್ಥೆ ಜನರನ್ನು ಮಾಲ್‌ಗಳು ಹಾಗೂ ಹೈ-ಸ್ಟ್ರೀಟ್‌ಗಳಿಗೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.
ಇದೇ ವೇಳೆ, ಅಗ್ಗದ ಬಟ್ಟೆ, ಪಾದರಕ್ಷೆ ಮತ್ತು ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ಜಿಎಸ್‌ಟಿ ಸ್ವಲ್ಪ ಇಳಿಕೆಯಾಗಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ. ಇದರಿಂದ ಬೇಡಿಕೆ ಹೆಚ್ಚಾಗಿ ಸಂಘಟಿತ ರಿಟೇಲ್ ಕ್ಷೇತ್ರಕ್ಕೆ ಬಲ ಸಿಗಲಿದೆ ಎಂಬ ನಿರೀಕ್ಷೆಯಿದೆ.



