April 9, 2026
Thursday, April 9, 2026
spot_img

📈 | ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಬರಲಿವೆ ಐದು ಭವ್ಯ ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನ ಬಜೆಟ್‌ನಲ್ಲಿ ಶಿಕ್ಷಣ, ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಅನಿಮೇಷನ್, ವಿಶ್ಯುಯಲ್ ಎಫೆಕ್ಟ್ಸ್ ಮತ್ತು ಗೇಮಿಂಗ್ (AVGC) ಕ್ಷೇತ್ರಕ್ಕೆ ಉತ್ತೇಜನ ನೀಡಲು ಮುಂಬೈನಲ್ಲಿ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್’ ಸ್ಥಾಪನೆ.

ದೇಶದ ವಿವಿಧೆಡೆ ಐದು ಅತ್ಯಾಧುನಿಕ ‘ವಿಶ್ವವಿದ್ಯಾಲಯ ಟೌನ್‌ಶಿಪ್‌’ಗಳ ನಿರ್ಮಾಣ.

ಒಂದೇ ಕಡೆ ಹಲವಾರು ಕಾಲೇಜುಗಳು, ಕೌಶಲ್ಯ ಕೇಂದ್ರಗಳು ಮತ್ತು ವಸತಿ ಸೌಕರ್ಯಗಳನ್ನು ಹೊಂದಿರುವ ವಿಶೇಷ ‘ಶೈಕ್ಷಣಿಕ ವಲಯ’ಗಳ ಯೋಜನೆ.

ದೇಶದ ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರಿಗಾಗಿ ತಲಾ ಒಂದು ಸರ್ಕಾರಿ ಹಾಸ್ಟೆಲ್ ನಿರ್ಮಾಣ.

ಪೂರ್ವ ಭಾರತದಲ್ಲಿ ಹೊಸದಾಗಿ ‘ರಾಷ್ಟ್ರೀಯ ವಿನ್ಯಾಸ ಸಂಸ್ಥೆ’ ಸ್ಥಾಪನೆ.

ಇಂಗಾಲದ ಹೊರಸೂಸುವಿಕೆ ತಡೆಗಟ್ಟಲು ಮುಂದಿನ 5 ವರ್ಷಗಳಿಗಾಗಿ ₹20,000 ಕೋಟಿ ಅನುದಾನ ಮೀಸಲು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !