ಬಿರಿಯಾನಿಯ ನಿಜವಾದ ರುಚಿ ಗೊತ್ತಾಗಬೇಕು ಅಂದರೆ ಅಂಬೂರು ಚಿಕನ್ ಬಿರಿಯಾನಿ ತಿನ್ನಲೇ ಬೇಕು. ಒಂದು ತುತ್ತು ತಿನ್ನುತ್ತಿದ್ದಂತೆ ಮತ್ತೆ ಮತ್ತೆ ಬೇಕೆನಿಸುವ ರುಚಿ. ತಮಿಳುನಾಡಿನ ಅಂಬೂರು ಹೋಟೆಲ್‌ಗಳಲ್ಲಿ ಸಿಗುವ ಈ ಬಿರಿಯಾನಿಯ ವಿಶೇಷತೆ ಅದರ ಸಿಂಪ್ಲಿಸಿಟಿಯಲ್ಲೇ ಅಡಗಿದೆ.
ಬೇಕಾಗುವ ಪದಾರ್ಥಗಳು
ಅಕ್ಕಿ – 2 ಕಪ್
ನೀರು – 3½ ಕಪ್
ಚಿಕನ್ ಮೆರಿನೇಷನ್‌ಗೆ:
ಚಿಕನ್ – 500 ಗ್ರಾಂ
ಮೊಸರು – ½ ಕಪ್
ಕೆಂಪು ಮೆಣಸಿನ ಪುಡಿ – 2 ಟೀ ಸ್ಪೂನ್
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್ ಸ್ಪೂನ್
ನಿಂಬೆ ರಸ – 1 ಟೇಬಲ್ ಸ್ಪೂನ್
ಉಪ್ಪು – ರುಚಿಗೆ
ಬಿರಿಯಾನಿಗೆ:
ಎಣ್ಣೆ – 3 ಟೇಬಲ್ ಸ್ಪೂನ್
ಬೆಣ್ಣೆ (ಐಚ್ಛಿಕ) – 1 ಟೇಬಲ್ ಸ್ಪೂನ್
ಈರುಳ್ಳಿ – 3 (ಸಣ್ಣಗೆ ಸ್ಲೈಸ್ ಮಾಡಿದವು)
ಟೊಮೇಟೋ – 2 (ಸಣ್ಣಗೆ ಕತ್ತರಿಸಿದವು)
ಹಸಿಮೆಣಸು – 2 (ಚಿರಿದವು)
ಕರಿಬೇವು – ಸ್ವಲ್ಪ
ಪುದೀನಾ – ಒಂದು ಮುಷ್ಟಿ
ಕೊತ್ತಂಬರಿ ಸೊಪ್ಪು – ಒಂದು ಮುಷ್ಟಿ
ದಾಲ್ಚಿನ್ನಿ – 1 ತುಂಡು
ಲವಂಗ – 3–4
ಏಲಕ್ಕಿ – ೩
ಚಿಕನ್ ಮೆರಿನೇಷನ್:
ಒಂದು ಬೌಲ್‌ನಲ್ಲಿ ಚಿಕನ್‌ಗೆ ಮೊಸರು, ಕೆಂಪು ಮೆಣಸಿನ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕನಿಷ್ಠ 30 ನಿಮಿಷ ಮೆರಿನೇಟ್ ಮಾಡಿ.
ಅಕ್ಕಿಯನ್ನು ತೊಳೆಯಿ 20 ನಿಮಿಷ ನೆನೆಸಿಡಿ. ಈಗ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಮತ್ತು ಬೆಣ್ಣೆ ಬಿಸಿ ಮಾಡಿ. ಇಡಿ ಮಸಾಲೆ ಸೇರಿಸಿ ಸುಗಂಧ ಬರುವವರೆಗೆ ಹುರಿಯಿರಿ. ನಂತರ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಬೇಕು.
ಈರುಳ್ಳಿಗೆ ಹಸಿಮೆಣಸು, ಕರಿಬೇವು, ಟೊಮೇಟೋ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಈಗ ಮೆರಿನೇಟ್ ಮಾಡಿದ ಚಿಕನ್ ಸೇರಿಸಿ ಮಧ್ಯಮ ಉರಿಯಲ್ಲಿ 8–10 ನಿಮಿಷ ಚೆನ್ನಾಗಿ ಬೇಯಿಸಿ. ಎಣ್ಣೆ ಮೇಲಕ್ಕೆ ಬರುವಂತೆ ಕಾಣಬೇಕು.
ಇದಕ್ಕೆ ನೆನೆಸಿದ ಅಕ್ಕಿ ಸೇರಿಸಿ ನಿಧಾನವಾಗಿ ಕಲಸಿ. ನೀರು ಹಾಕಿ ಉಪ್ಪು ಚೆಕ್ ಮಾಡಿ. ಒಂದು ಕುದಿ ಬಂದ ನಂತರ ಮುಚ್ಚಿ ಕಡಿಮೆ ಉರಿಯಲ್ಲಿ 12–15 ನಿಮಿಷ ಬೇಯಿಸಿ. ಅನ್ನ ಬೆಂದ ಮೇಲೆ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮುಚ್ಚಿ 5 ನಿಮಿಷ ದಂಗೆ ಬಿಡಿ.



