ಸರಳವಾಗಿ ಮಾಡಬಹುದಾದ ಮತ್ತು ರುಚಿಕರವಾದ ಉಪಹಾರ ಅಂದ್ರೆ ಅದು ಒಗ್ಗರಣೆ ಅನ್ನ. ಮನೆಯಲ್ಲಿ ಉಳಿದ ಅನ್ನದಿಂದ ಕೂಡಾ ಈ ರೆಸಿಪಿಯನ್ನು ತ್ವರಿತವಾಗಿ ಮಾಡಬಹುದು. ಬೆಳಗಿನ ಉಪಹಾರಕ್ಕೆ, ಲಂಚ್ ಬಾಕ್ಸ್‌ಗೆ ಅಥವಾ ರಾತ್ರಿ ಊಟಕ್ಕೆ ಇದು ಬೆಸ್ಟ್ ಆಯ್ಕೆ.
ಬೇಕಾಗುವ ಪದಾರ್ಥಗಳು:
ಬೇಯಿಸಿದ ಅನ್ನ – 2 ಕಪ್
ಎಣ್ಣೆ – 2 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಡಲೆ ಬೇಳೆ – 1 ಟೀ ಸ್ಪೂನ್
ಕರಿಬೇವು – 1 ಚಿಕ್ಕ ಚುಕ್ಕಿ
ಹಸಿಮೆಣಸು – 2
ಶುಂಠಿ – ½ ಇಂಚು
ಹಿಂಗು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಬಂಗಾರ ಬಣ್ಣ ಬರುವವರೆಗೆ ಹುರಿಯಿರಿ. ಈಗ ಕರಿಬೇವು, ಹಸಿಮೆಣಸು, ಶುಂಠಿ ಮತ್ತು ಸ್ವಲ್ಪ ಹಿಂಗೆ ಸೇರಿಸಿ ವಾಸನೆ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿದ ಅನ್ನವನ್ನು ಸೇರಿಸಿ, ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

