ಬೆಳಗಿನ ತಿಂಡಿಗೆ ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಸರಳ ಮತ್ತು ರುಚಿಕರವಾದ ರೈಸ್ ಬಾತ್ ಬೇಕೆಂದು ಅನಿಸಿದಾಗ, “ಈರುಳ್ಳಿ ರೈಸ್” ಅತ್ಯುತ್ತಮ ಆಯ್ಕೆ. ಈ ಅನ್ನವನ್ನು ತಯಾರಿಸಲು ಅಡಿಗೆಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳೇ ಸಾಕು. ಹುರಿದ ಈರುಳ್ಳಿ ಸುವಾಸನೆಯು ಮತ್ತು ಮಸಾಲೆಗಳ ರುಚಿಯು ಅನ್ನಕ್ಕೆ ಅದ್ಭುತ ಸುವಾಸನೆ ನೀಡುತ್ತದೆ.
ಅಗತ್ಯವಿರುವ ಪದಾರ್ಥಗಳು:
ಅಕ್ಕಿ – 1 ಕಪ್
ಈರುಳ್ಳಿ – 2 ದೊಡ್ಡದು (ಸಣ್ಣ ಸ್ಲೈಸ್ ಮಾಡಿ)
ಹಸಿಮೆಣಸಿನಕಾಯಿ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಅರಿಶಿಣ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕಾಳುಮೆಣಸು ಪುಡಿ – ½ ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ತಯಾರಿಸುವ ವಿಧಾನ:
ಮೊದಲು ಅಕ್ಕಿಯನ್ನು ಬೇಯಿಸಿ ಆರಲು ಬಿಡಿ.
ಒಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿದ ನಂತರ ಕರಿಬೇವು ಮತ್ತು ಹಸಿಮೆಣಸಿನಕಾಯಿ ಸೇರಿಸಿ. ನಂತರ ಈರುಳ್ಳಿ ಸ್ಲೈಸ್‌ಗಳನ್ನು ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಕಾಳುಮೆಣಸು ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಅನ್ನವನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಬಿಸಿ ಸರ್ವ್ ಮಾಡಿ.

