Thursday, November 6, 2025

Rice series 18 | ನವಾಬಿ ರುಚಿಯ ಹೈದರಾಬಾದಿ ವೆಜ್ ಬಿರಿಯಾನಿ ತಯಾರಿಸುವ ವಿಧಾನ ಇಲ್ಲಿದೆ

ಹೈದರಾಬಾದಿ ಬಿರಿಯಾನಿ ಅಂದ್ರೆ ಕೇವಲ ಊಟವಲ್ಲ, ಅದು ಒಂದು ಸಂಪ್ರದಾಯ. ಬಾಸ್ಮತಿ ಅಕ್ಕಿ, ಮಸಾಲೆ ಮತ್ತು ಸುವಾಸನೆಯಿಂದ ತುಂಬಿದ ಈ ಖಾದ್ಯವನ್ನು ಮೊಘಲ್ ಕಾಲದಿಂದಲೇ ವಿಶೇಷ ಅಡುಗೆಯಾಗಿ ಪರಿಗಣಿಸಲಾಗಿದೆ. ಈ ಬಿರಿಯಾನಿಯು ತನ್ನ ರುಚಿ ಮತ್ತು ಪರಿಮಳದಿಂದ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.

ಬೇಕಾಗುವ ಸಾಮಗ್ರಿಗಳು:

ಬಾಸ್ಮತಿ ಅಕ್ಕಿ – 2 ಕಪ್
ಕ್ಯಾರಟ್, ಬೀನ್ಸ್, ಕ್ಯಾಪ್ಸಿಕಂ, ಆಲೂಗಡ್ಡೆ ಮುಂತಾದ ತರಕಾರಿಗಳು – 1 ಕಪ್
ಈರುಳ್ಳಿ – 2
ಟೊಮಾಟೋ – 2
ಮೊಸರು – ½ ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್
ಬಿರಿಯಾನಿ ಮಸಾಲೆ – 2 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ – 2
ಪುದೀನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು – ತಕ್ಕಮಟ್ಟಿಗೆ
ನಿಂಬೆ ರಸ – 1 ಟೇಬಲ್ ಸ್ಪೂನ್
ಕೇಸರಿ ಬಣ್ಣ ಅಥವಾ ಕೇಸರಿ ಹಾಲು – 2 ಟೇಬಲ್ ಸ್ಪೂನ್
ತುಪ್ಪ ಮತ್ತು ಎಣ್ಣೆ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಂತೆ

ತಯಾರಿಸುವ ವಿಧಾನ:

ಮೊದಲು ಬಾಸ್ಮತಿ ಅಕ್ಕಿಯನ್ನು 30 ನಿಮಿಷ ನೀರಿನಲ್ಲಿ ನೆನೆಸಿಡಿ.

ಬಾಣಲೆಗೆ ತುಪ್ಪ ಹಾಗೂ ಎಣ್ಣೆ ಹಾಕಿ ಬಿಸಿ ಮಾಡಿದ ನಂತರ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ತರಕಾರಿಗಳನ್ನು ಸೇರಿಸಿ ಬೇಯಿಸಿ.ನಂತರ ಟೊಮಾಟೋ, ಉಪ್ಪು, ಬಿರಿಯಾನಿ ಮಸಾಲೆ, ಮೊಸರು, ಪುದೀನ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಬೇರೆ ಪಾತ್ರೆಯಲ್ಲಿ ಅಕ್ಕಿಯನ್ನು ಬಿಸಿ ನೀರಿನಲ್ಲಿ ಅರ್ಧ ಭಾಗದಷ್ಟು ಬೇಯಿಸಿ, ನಂತರ ತರಕಾರಿ ಮಿಶ್ರಣದ ಮೇಲೆ ಒಂದು ಹಂತ ಅಕ್ಕಿ, ಒಂದು ಹಂತ ಮಸಾಲೆ ಹೀಗೆ ಪದರದಂತೆ ಹಾಕಿ. ಮೇಲೆ ಕೇಸರಿ ಹಾಲು ಹಾಗೂ ನಿಂಬೆ ರಸ ಹಾಕಿ ಮುಚ್ಚಿ, ಕಡಿಮೆ ಉರಿಯಲ್ಲಿ 15–20 ನಿಮಿಷ “ದಂ” ಮಾಡಿ ಬೇಯಿಸಿ.

error: Content is protected !!