Friday, November 7, 2025

Rice series 19 | ಬಾಯಲ್ಲಿ ನೀರೂರಿಸುವ ಪುದೀನಾ ರೈಸ್ ಟ್ರೈ ಮಾಡಿ!

ಪುದೀ ಅಂದ್ರೆ ಕೇವಲ ಚಟ್ನಿ ಅಥವಾ ತಂಬುಳಿಗೆ ಮಾತ್ರವಲ್ಲ, ಅದರಿಂದ ತಯಾರಾಗುವ ಅನ್ನಕ್ಕೂ ವಿಶಿಷ್ಟ ರುಚಿ ಮತ್ತು ಸುವಾಸನೆ ಇರುತ್ತದೆ. ಪುದಿನಾ ರೈಸ್ ಹಗುರವಾಗಿದ್ದು, ಲಂಚ್‌ಬಾಕ್ಸ್‌ಗೂ ಸೂಕ್ತವಾದ ಒಂದು ಆರೋಗ್ಯಕರ ಆಯ್ಕೆ.

ಬೇಕಾಗುವ ಪದಾರ್ಥಗಳು:

ಅಕ್ಕಿ – 1 ಕಪ್
ಪುದೀನಾ ಎಲೆಗಳು – 1 ಕಪ್
ಕೊತ್ತಂಬರಿ ಸೊಪ್ಪು – ½ ಕಪ್
ಹಸಿಮೆಣಸು – 2-3
ಬೆಳ್ಳುಳ್ಳಿ – 4 ಕಲೆ
ಶುಂಠಿ – 1 ಇಂಚು ತುಂಡು
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದದ್ದು)
ಏಲಕ್ಕಿ – 2
ಲವಂಗ – 2
ದಾಲ್ಚಿನ್ನಿ ತುಂಡು – 1
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಕ್ಕಿಯ ಎರಡರಷ್ಟು

ಮಾಡುವ ವಿಧಾನ:

ಮೊದಲು ಪುದೀನಾ, ಕೊತ್ತಂಬರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ನೀರಿನಿಂದ ಪೇಸ್ಟ್ ಮಾಡಿ.

ಪ್ರೆಶರ್ ಕುಕ್ಕರ್ ಅಥವಾ ಕಾದ ಬಾಣಲಿಯಲ್ಲಿ ಎಣ್ಣೆ ಹಾಕಿ, ಏಲಕ್ಕಿ, ಲವಂಗ, ದಾಲ್ಚಿನ್ನಿ ಹಾಕಿ ಹುರಿಯಿರಿ. ಈರುಳ್ಳಿ ಸೇರಿಸಿ ಬಂಗಾರ ಬಣ್ಣ ಬರುವವರೆಗೆ ಹುರಿಯಿರಿ. ನಂತರ ತಯಾರಿಸಿದ ಪುದೀನಾ ಪೇಸ್ಟ್ ಸೇರಿಸಿ 2-3 ನಿಮಿಷ ಹುರಿಯಿರಿ. ಈಗ ಅಕ್ಕಿ, ಉಪ್ಪು ಹಾಗೂ ನೀರು ಸೇರಿಸಿ ಚೆನ್ನಾಗಿ ಕಲಸಿ. ಕುಕ್ಕರ್ ಮುಚ್ಚಿ 2 ಸಿಟಿ ಬರುವವರೆಗೆ ಬೇಯಿಸಿ.

error: Content is protected !!