ಮನೆಯಲ್ಲಿ ತಕ್ಷಣ ತಯಾರಿಸಬಹುದಾದ ಅತ್ಯಂತ ಜನಪ್ರಿಯ ತಿಂಡಿ ಒಂದೇ ಲೆಮನ್ ರೈಸ್. ನಿಂಬೆಹಣ್ಣಿನ ಹುಳಿಯ ರುಚಿ ಮತ್ತು ಒಗ್ಗರಣೆಯ ಸುವಾಸನೆಯಿಂದ ಈ ರೈಸ್ ಎಲ್ಲರಿಗೂ ಅಚ್ಚುಮೆಚ್ಚಾಗುತ್ತದೆ. ಅಳತೆಯನ್ನು ಸರಿಯಾಗಿ ಪಾಲಿಸಿದರೆ, ಮನೆಯಲ್ಲೇ ಹೋಟೆಲ್ ಸ್ಟೈಲ್ ಲೆಮನ್ ರೈಸ್ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು
ಅನ್ನಕ್ಕೆ:
ಅಕ್ಕಿ – 4 ಗ್ಲಾಸ್
ಅರಿಶಿನ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಎಣ್ಣೆ – 1 ಟೀಸ್ಪೂನ್
ನಿಂಬೆಹಣ್ಣು – 4 (ಮಧ್ಯಮ ಗಾತ್ರದ)
ಒಗ್ಗರಣೆಗೆ:
ಎಣ್ಣೆ – 8 ಟೀಸ್ಪೂನ್
ಶೇಂಗಾ – 6 ಟೀಸ್ಪೂನ್
ಕಡಲೆಬೇಳೆ – 2 ಟೀಸ್ಪೂನ್
ಸಾಸಿವೆ – 2 ಟೀಸ್ಪೂನ್
ಒಣ ಮೆಣಸಿನಕಾಯಿ – 10 ರಿಂದ 12
ಹಸಿ ಮೆಣಸಿನಕಾಯಿ – 10
ಕರಿಬೇವು – 2 ಎಸಳು
ಇಂಗು – ಸ್ವಲ್ಪ
ಉಪ್ಪು – 1 ಟೀಸ್ಪೂನ್
ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು ಕುಕ್ಕರ್‌ನಲ್ಲಿ ಆರು ಗ್ಲಾಸ್ ನೀರಿನೊಂದಿಗೆ, ಅರಿಶಿನ, ಉಪ್ಪು ಹಾಗೂ ಸ್ವಲ್ಪ ಎಣ್ಣೆ ಸೇರಿಸಿ ಮೂರು ಸೀಟಿಗಳವರೆಗೆ ಬೇಯಿಸಿಕೊಳ್ಳಿ.
ಕುಕ್ಕರ್‌ನಲ್ಲಿರುವ ಅನ್ನ ತಣ್ಣಗಾದ ಬಳಿಕ ಅಗಲವಾದ ಪಾತ್ರೆಗೆ ಹಾಕಿ ಸ್ವಲ್ಪ ಒಣಗಲು ಬಿಡಿ. ಈ ಮಧ್ಯೆ ಒಗ್ಗರಣೆಯನ್ನು ತಯಾರಿಸಿ. ಬಿಸಿ ಎಣ್ಣೆಗೆ ಶೇಂಗಾ ಹಾಕಿ ಹುರಿದು, ನಂತರ ಕಡಲೆಬೇಳೆ, ಸಾಸಿವೆ ಸೇರಿಸಿ ಬಣ್ಣ ಬದಲಾಯುವವರೆಗೆ ಹುರಿಯಿರಿ. ನಂತರ ಒಣ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಕರಿಬೇವು ಮತ್ತು ಇಂಗು ಸೇರಿಸಿ ಗರಿಗರಿಯಾಗುವವರೆಗೆ ಹುರಿಯಿರಿ.
ಈ ಒಗ್ಗರಣೆಯನ್ನು ಅನ್ನದ ಮೇಲೆ ಹಾಕಿ, ನಿಂಬೆ ರಸ ಮತ್ತು ಉಪ್ಪು ಸೇರಿಸಿ ನಿಧಾನವಾಗಿ ಕೈಯಿಂದ ಚೆನ್ನಾಗಿ ಬೆರೆಸಿ. ಎಲ್ಲ ಪದಾರ್ಥಗಳು ಚೆನ್ನಾಗಿ ಮಿಶ್ರಣವಾದ ನಂತರ ಅರ್ಧ ಗಂಟೆ ಕಾಲ ಪಕ್ಕಕ್ಕೆ ಇಡಿ, ಇದರಿಂದ ರುಚಿ ಚೆನ್ನಾಗಿ ಎಳೆದುಕೊಳ್ಳುತ್ತದೆ.