Tuesday, December 2, 2025

Rice series 45 | ಒನ್ ಪಾಟ್ ರೆಸಿಪಿ ಕಡಿ ಚಾವಲ್: ಬ್ಯುಸಿ ಮಾರ್ನಿಂಗ್ ಗೆ ಬೆಸ್ಟ್ ಬ್ರೇಕ್ ಫಾಸ್ಟ್!

ಬೆಳಿಗ್ಗೆ ಬೇಗ ತಯಾರಾಗುವ, ಹೊಟ್ಟೆ ತುಂಬುವ ಹಾಗೂ ಆರೋಗ್ಯಕರ ಉಪಾಹಾರವನ್ನು ಹುಡುಕುತ್ತಿದ್ದೀರಾ? ಹಾಗಾದರೆ ಉತ್ತರ ಭಾರತದ ಪ್ರಸಿದ್ಧ ಕಡಿ–ಚಾವಲ್ ಅನ್ನು ಈಗ ಒನ್ ಪಾಟ್ ಸ್ಟೈಲ್ನಲ್ಲಿ ಸುಲಭವಾಗಿ ತಯಾರಿಸಬಹುದು. ಬೆಳಿಗ್ಗೆ ಸಮಯ ಕಡಿಮೆ ಇದ್ದರೂ, ಒಂದೇ ಪಾತ್ರೆಯಲ್ಲಿ ಸಿದ್ಧವಾಗುವ ಈ ರುಚಿಕರ ಖಾದ್ಯ ನಿಮ್ಮ ದಿನವನ್ನು ಶಕ್ತಿಯಿಂದ ಆರಂಭಿಸಲು ಸಾಕು.

ಬೇಕಾಗುವ ಪದಾರ್ಥಗಳು

ಅಕ್ಕಿ – 1 ಕಪ್
ಕಡಲೆಹಿಟ್ಟು- 3 ಟೇಬಲ್ ಸ್ಪೂನ್
ಮೊಸರು – 1 ಕಪ್
ನೀರು – 3 ಕಪ್
ಸಾಸಿವೆ – 1 ಟೀ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಒಣ ಮೆಣಸಿನಕಾಯಿ – 2
ಹಸಿಮೆಣಸು – 1
ಕರಿಬೇವು – ಸ್ವಲ್ಪ
ಅರಿಶಿನ – ½ ಟೀ ಸ್ಪೂನ್
ಉಪ್ಪು – ರುಚಿಗೆ
ಎಣ್ಣೆ – 2 ಟೇಬಲ್ ಸ್ಪೂನ್
ಹಿಂಗು – ಚಿಟಿಕೆ

ತಯಾರಿಸುವ ವಿಧಾನ

ಮೊದಲು ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ, ಹಸಿಮೆಣಸು, ಕರಿಬೇವು ಮತ್ತು ಹಿಂಗು ಹಾಕಿ ಒಗ್ಗರಣೆ ಕೊಡಿ. ಈಗ ಒಂದು ಪಾತ್ರೆಯಲ್ಲಿ ಮೊಸರು, ಕಡಲೆಹಿಟ್ಟು, ಅರಿಶಿನ ಸೇರಿಸಿ ನೀರು ಹಾಕಿ ಗಂಟು ಇಲ್ಲದಂತೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಯಲು ಬಿಡಿ. ಬಳಿಕ ಅಕ್ಕಿ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಕುಕ್ಕರ್‌ನಲ್ಲಿ 2 ಸಿಟಿ ಹಾಕಿ ಬೇಯಿಸಿ. ತಣ್ಣಗಾದ ನಂತರ ತೆರೆದು ಚೆನ್ನಾಗಿ ಕಲಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

error: Content is protected !!