Thursday, December 4, 2025

Rice series 47 | ಬಾಯಲ್ಲಿ ನೀರೂರಿಸುತ್ತೆ ಗಾರ್ಲಿಕ್ ಚಿಲ್ಲಿ ರೈಸ್! ಒಮ್ಮೆ ಟ್ರೈ ಮಾಡಿ

ಪ್ರತಿದಿನ ಒಂದೇ ತಿಂಡಿ ತಿಂದು ಬೇಸರವಾಗಿದ್ರೆ, ಬೆಳಿಗ್ಗೆಯೇ 10 ನಿಮಿಷಗಳಲ್ಲಿ ಮಾಡುವ ಈ ಗಾರ್ಲಿಕ್ ಚಿಲ್ಲಿ ರೈಸ್ ನಿಮ್ಮ ದಿನಕ್ಕೆ ಸ್ಪೈಸಿ ಶುಭಾರಂಭ ಕೊಡುತ್ತೆ. ಉಳಿದ ಅನ್ನದಿಂದ ಕೂಡ ತಯಾರಿಸಬಹುದಾದ ಈ ಡಿಶ್, ಎಲ್ಲರಿಗೂ ಇಷ್ಟವಾಗುವ ಬ್ರೇಕ್‌ಫಾಸ್ಟ್ ಆಯ್ಕೆ.

ಬೇಕಾಗುವ ಪದಾರ್ಥಗಳು:

ಅನ್ನ – 2 ಕಪ್
ಎಣ್ಣೆ – 2 ಚಮಚ
ಬೆಳ್ಳುಳ್ಳಿ (ಸಣ್ಣ ಕತ್ತರಿಸಿದ) – 1½ ಚಮಚ
ಒಣ ಕೆಂಪು ಮೆಣಸಿನಕಾಯಿ – 2
ರೆಡ್ ಚಿಲ್ಲಿ ಫ್ಲೇಕ್ಸ್ – ½ ಚಮಚ
ಸೋಯಾ ಸಾಸ್ – 1 ಚಮಚ
ವಿನೆಗರ್ / ನಿಂಬೆಹಣ್ಣಿನ ರಸ – ½ ಚಮಚ
ಉಪ್ಪು – ರುಚಿಗೆ
ಸ್ಪ್ರಿಂಗ್ ಆನಿಯನ್ ಅಥವಾ ಕೊತ್ತಂಬರಿ – ಸಜ್ಜಿಗೆ

ಮಾಡುವ ವಿಧಾನ:

ಒಂದು ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ. ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಕ್ರಂಚಿಯಾಗುವವರೆಗೂ ಹುರಿಯಿರಿ. ಬಳಿಕ ಒಣ ಮೆಣಸಿನಕಾಯಿ ಮತ್ತು ಚಿಲ್ಲಿ ಫ್ಲೇಕ್ಸ್ ಸೇರಿಸಿ. ಈಗ ಸೋಯಾ ಸಾಸ್, ವಿನೆಗರ್ ಹಾಗೂ ಉಪ್ಪು ಹಾಕಿ ತಕ್ಷಣವೇ ಅನ್ನ ಸೇರಿಸಿ. ಹೈ ಫ್ಲೇಮ್‌ನಲ್ಲಿ 2–3 ನಿಮಿಷ ಚೆನ್ನಾಗಿ ಫ್ರೈ ಮಾಡಿ ಮೇಲೆ ಸ್ಪ್ರಿಂಗ್ ಆನಿಯನ್ ಅಥವಾ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.

error: Content is protected !!