ತರಕಾರಿ ಕಿಚಡಿ ಅಂತಂದ್ರೆ ಸಿಂಪಲ್, ಸಾಫ್ಟ್ ಮತ್ತು ಹೊಟ್ಟೆಗೆ ತುಂಬಾ ಹಿತವಾಗಿರುವ ಒನ್‌ಪಾಟ್ ರೆಸಿಪಿ. ಅಕ್ಕಿ, ಬೇಳೆ ಮತ್ತು ತರಕಾರಿಗಳ ಒಳ್ಳೆಯ ಸಂಯೋಜನೆಯಾಗಿರುವ ಈ ಕಿಚಡಿ ಕಡಿಮೆ ಮಸಾಲೆಯಲ್ಲಿ ತಯಾರಾಗುವ ಕಾರಣ ಆರೋಗ್ಯಕರವಾಗಿಯೇ ಸವಿಯಲು ಚೆನ್ನಾಗಿರುತ್ತದೆ.
ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಕಪ್
ಮೂಂಗ್ ದಾಲ್ – ½ ಕಪ್
ಕ್ಯಾರೆಟ್ – 1
ಬೀನ್ಸ್ – 6–8
ಬಟಾಣಿ – ½ ಕಪ್
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸು – 1–2
ಶುಂಠಿ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಅರಶಿನ ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ/ಎಣ್ಣೆ – 1–2 ಟೇಬಲ್ ಸ್ಪೂನ್
ನೀರು – 4–5 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಮೊದಲು ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ತೊಳೆದು 10 ನಿಮಿಷ ನೆನೆಸಿಡಿ. ಕುಕ್ಕರ್‌ನಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ನಂತರ ಶುಂಠಿ, ಹಸಿಮೆಣಸು ಮತ್ತು ಈರುಳ್ಳಿ ಸೇರಿಸಿ ಲೈಟ್ ಬ್ರೌನ್ ಆಗುವವರೆಗೆ ಹುರಿಯಿರಿ. ಟೊಮೆಟೊ ಮತ್ತು ಎಲ್ಲಾ ತರಕಾರಿಗಳನ್ನು ಸೇರಿಸಿ ಸ್ವಲ್ಪಫ್ರೈ ಮಾಡಿ. ಅರಶಿನ, ಉಪ್ಪು ಹಾಕಿ ಮಿಶ್ರಣ ಮಾಡಿ.
ಈಗ ನೀರು ಹಾಕಿ ನೆನೆಸಿದ ಅಕ್ಕಿ-ಬೇಳೆ ಸೇರಿಸಿ ಕುಕ್ಕರ್ ಮುಚ್ಚಿ 3–4 ವಿಸಿಲ್ ಬೇಯಿಸಿ. ಪ್ರೆಶರ್ ಇಳಿದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಬಿಸಿ ಬಿಸಿ ತರಕಾರಿ ರೈಸ್ ಕಿಚಡಿಯನ್ನು ತುಪ್ಪ ಅಥವಾ ಮೊಸರಿನ ಜೊತೆಗೆ ಸರ್ವ್ ಮಾಡಿ.

