Monday, December 15, 2025

Rice series 56 | ಫಟಾಫಟ್ ಅಂತ ರೆಡಿ ಆಗುತ್ತೆ ಚಿಲ್ಲಿ ಗಾರ್ಲಿಕ್ ವೆಜಿಟೇಬಲ್ ರೈಸ್! ನೀವೂ ಟ್ರೈ ಮಾಡಿ

ಬೆಳಿಗ್ಗೆ ಆತುರದ ಸಮಯದಲ್ಲಿ ಕೂಡ ರುಚಿ–ಪೌಷ್ಟಿಕತೆ ಇರುವ ಒಂದು ತ್ವರಿತ ಬ್ರೇಕ್‌ಫಾಸ್ಟ್ ಬೇಕಾಗುತ್ತೆ. ಅಂತಹ ಸಮಯದಲ್ಲಿ ಚಿಲ್ಲಿ ಗಾರ್ಲಿಕ್ ವೆಜಿಟೇಬಲ್ ರೈಸ್ ಬೆಸ್ಟ್. ಬೆಳ್ಳುಳ್ಳಿ–ಮೆಣಸಿನಕಾಯಿ ಸುವಾಸನೆಯ ಜೊತೆ ತಾಜಾ ತರಕಾರಿಗಳ ಕ್ರಂಚ್ ಈ ಬಾತ್‌ಗೆ ಸ್ಪೆಷಲ್ ಫ್ಲೇವರ್ ಕೊಡುತ್ತದೆ.

ಬೇಕಾಗುವ ಪದಾರ್ಥಗಳು:

ಅನ್ನ – 2 ಕಪ್
ಕ್ಯಾರೆಟ್ – ¼ ಕಪ್
ಬೀನ್ಸ್ – ¼ ಕಪ್
ಕ್ಯಾಪ್ಸಿಕಂ – ¼ ಕಪ್
ಬೆಳ್ಳುಳ್ಳಿ – 6-7 ಎಸಳು
ಹಸಿಮೆಣಸು – 2 (ಸ್ಲೈಸ್)
ಸೋಯಾ ಸಾಸ್ – 1 tsp
ಚಿಲ್ಲಿ ಸಾಸ್ – 1 tsp
ವಿನೇಗರ್ – ½ tsp
ಮೆಣಸು ಪುಡಿ – ½ tsp
ಎಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ

ಮಾಡುವ ವಿಧಾನ:

ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಕಟ್ ಮಾಡಿದ ಬೆಳ್ಳುಳ್ಳಿ ಮತ್ತು ಹಸಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ. ಈಗ ಕ್ಯಾರೆಟ್, ಬೀನ್ಸ್ ಹಾಗೂ ಕ್ಯಾಪ್ಸಿಕಂ ಸೇರಿಸಿ 2–3 ನಿಮಿಷ ಹೈ ಫ್ಲೇಮ್‌ನಲ್ಲಿ ಫ್ರೈ ಮಾಡಿ. ನಂತರ ಸೋಯಾ ಸಾಸ್, ಚಿಲ್ಲಿ ಸಾಸ್, ವಿನೇಗರ್ ಹಾಕಿ ಮಿಕ್ಸ್ ಮಾಡಿ. ಈಗ ಅನ್ನ ಸೇರಿಸಿ ಮೆಣಸು ಪುಡಿ ಮತ್ತು ಉಪ್ಪು ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. ಈಗ ಮತ್ತೊಮ್ಮೆ ಹೈ ಫ್ಲೇಮ್‌ನಲ್ಲಿ ಒಂದು ನಿಮಿಷ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ.

error: Content is protected !!