March 11, 2026
Wednesday, March 11, 2026
spot_img

Rice series 57 | ಹೋಟೆಲ್ ಸ್ಟೈಲ್ ಪನೀರ್ ತವಾ ಪುಲಾವ್! ಏನ್ ರುಚಿ ಗೊತ್ತಾ?

ಮನೆಯಲ್ಲಿ ಉಳಿದ ಅನ್ನವನ್ನು ಬಳಸಿಕೊಂಡು ರುಚಿಯಾದ ಮತ್ತು ಸ್ಪೈಸಿ ಬ್ರೇಕ್ ಫಾಸ್ಟ್ ತಯಾರಿಸಬೇಕೆಂದಾಗ ಪನೀರ್ ತವಾ ಪುಲಾವ್ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:

ಅನ್ನ – 2 ಕಪ್
ಪನೀರ್ ಕ್ಯೂಬ್ಸ್ – 1 ಕಪ್
ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ)
ಟೊಮೆಟೋ – 2 (ಸಣ್ಣಗೆ ಕತ್ತರಿಸಿದ)
ಕ್ಯಾಪ್ಸಿಕಂ – 1
ಹಸಿರು ಬಟಾಣಿ – ½ ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಪಾವ್ ಭಾಜಿ ಮಸಾಲಾ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಬೆಣ್ಣೆ + ಎಣ್ಣೆ – ಅಗತ್ಯಕ್ಕೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆ ರಸ – ಸ್ವಲ್ಪ

ಮಾಡುವ ವಿಧಾನ:

ತವಾವನ್ನು ಬಿಸಿ ಮಾಡಿ ಬೆಣ್ಣೆ ಮತ್ತು ಸ್ವಲ್ಪ ಎಣ್ಣೆ ಹಾಕಿ. ಇದಕ್ಕೆ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೂ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ಈಗ ಟೊಮೆಟೋ, ಉಪ್ಪು ಸೇರಿಸಿ ಮೃದುವಾಗುವವರೆಗೆ ಬೇಯಿಸಿ.

ಕ್ಯಾಪ್ಸಿಕಂ, ಬಟಾಣಿ ಹಾಕಿ ಸ್ವಲ್ಪ ಬೇಯಿಸಿ. ಪನೀರ್ ಕ್ಯೂಬ್ಸ್ ಸೇರಿಸಿ ಮೃದುವಾಗಿ ಮಿಕ್ಸ್ ಮಾಡಿ. ನಂತರ ಎಲ್ಲಾ ಮಸಾಲಾ ಪುಡಿಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಅನ್ನ ಸೇರಿಸಿ ನಿಧಾನವಾಗಿ ತಿರುಗಿಸಿ. ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಪನೀರ್ ತವಾ ಪುಲಾವ್ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !