ಬೆಳಗಿನ ತಿಂಡಿಗೆ ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಇರುವ ತಿಂಡಿ ಬೇಕೆಂದರೆ ಮೊಸರನ್ನ ಉತ್ತಮ ಆಯ್ಕೆ. ಈ ಮೊಸರನ್ನ ನಿಜಕ್ಕೂ ಹೊಟ್ಟೆಗೂ ಮನಸಿಗೂ ತಂಪು ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಅನ್ನ – 1 ಕಪ್
ಮೊಸರು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಹಾಲು – ¼ ಕಪ್ (ಕ್ರೀಮಿನಸ್‌ಗಾಗಿ)
ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – ½ ಟೀ ಸ್ಪೂನ್
ಮೆಣಸಿನಕಾಯಿ – 1
ಕರಿಬೇವು – ಒಂದು ಕಡ್ಡಿ
ಹಿಂಗು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ದಾಳಿಂಬೆ – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಬಿಸಿ ಅನ್ನವನ್ನು ತಣ್ಣಗಾಗಲು ಬಿಡಿ. ಒಂದು ಪಾತ್ರೆಯಲ್ಲಿ ಅನ್ನಕ್ಕೆ ಮೊಸರು, ಹಾಲು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈಗ ಒಂದು ಕಾವಲಿನಲ್ಲಿ ಎಣ್ಣೆ ಹಾಕಿ, ಸಾಸಿವೆ, ಉದ್ದಿನ ಬೇಳೆ, ಹಿಂಗು, ಮೆಣಸಿನಕಾಯಿ ಹಾಗೂ ಕರಿಬೇವು ಹಾಕಿ ಫ್ರೈ ಮಾಡಿ. ಅದನ್ನು ಮೊಸರನ್ನದ ಮೇಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ದಾಳಿಂಬೆ ಬೀಜ ಹಾಕಿ ಅಲಂಕರಿಸಿ.