ಬ್ರೊಕೊಲಿ ಫ್ರೈಡ್ ರೈಸ್ ಪೋಷಕಾಂಶಗಳಿಂದ ಸಮೃದ್ಧವಾದ ಬ್ರೊಕೊಲಿ ಮತ್ತು ಹಿಂದಿನ ರಾತ್ರಿ ಉಳಿದ ಅನ್ನ ಬಳಸಿಕೊಂಡು ಈ ಬ್ರೇಕ್‌ಫಾಸ್ಟ್ ರೆಸಿಪಿಯನ್ನು ಸುಲಭವಾಗಿ ತಯಾರಿಸಬಹುದು. ಹೆಚ್ಚು ಎಣ್ಣೆ ಇಲ್ಲದೆ ಮಾಡುವುದರಿಂದ ಇದು ಹೊಟ್ಟೆಗೆ ಹಗುರವಾಗಿದ್ದು ದಿನವಿಡೀ ಶಕ್ತಿ ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಅನ್ನ – 2 ಕಪ್
ಬ್ರೊಕೊಲಿ (ಸಣ್ಣ ತುಂಡು ಮಾಡಿದ್ದು) – 1 ಕಪ್
ಎಣ್ಣೆ – 1½ ಟೇಬಲ್ ಸ್ಪೂನ್
ಬೆಳ್ಳುಳ್ಳಿ (ಸಣ್ಣ ಕತ್ತರಿಸಿದ್ದು) – 1 ಟೇಬಲ್ ಸ್ಪೂನ್
ಹಸಿಮೆಣಸು – 1
ಈರುಳ್ಳಿ – 1 ಸಣ್ಣದು
ಸೋಯಾ ಸಾಸ್ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸು ಪುಡಿ – ಸ್ವಲ್ಪ
ನಿಂಬೆ ರಸ – ಸ್ವಲ್ಪ (ಐಚ್ಛಿಕ)
ಮಾಡುವ ವಿಧಾನ:
ಮೊದಲು ಬ್ರೊಕೊಲಿಯನ್ನು ಸ್ವಲ್ಪ ಉಪ್ಪು ಹಾಕಿದ ನೀರಲ್ಲಿ 2 ನಿಮಿಷ ಕುದಿಸಿ ನೀರು ತೆಗೆದಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಹಾಗೂ ಹಸಿಮೆಣಸು ಹಾಕಿ ಸ್ವಲ್ಪ ಹುರಿಯಿರಿ.
ನಂತರ ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಹುರಿಯಿರಿ. ಈಗ ಬ್ರೊಕೊಲಿ ಸೇರಿಸಿ ಒಂದು–ಎರಡು ನಿಮಿಷ ಹುರಿಯಿರಿ. ನಂತರ ಬೇಯಿಸಿದ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸೋಯಾ ಸಾಸ್, ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ ಕಡಿಮೆ ಉರಿಯಲ್ಲಿ ಎರಡು ನಿಮಿಷ ಫ್ರೈ ಮಾಡಿ. ಕೊನೆಯಲ್ಲಿ ಸ್ವಲ್ಪ ನಿಂಬೆ ರಸ ಹಾಕಿ ಬೆರೆಸಿ ಗ್ಯಾಸ್ ಆರಿಸಿ. ಬಿಸಿ ಬಿಸಿಯಾಗಿ ಸರ್ವ್ ಮಾಡಿ.

