ಬೆಳಗಿನ ತಿಂಡಿಗೆ ಪೌಷ್ಟಿಕವಾಗಿರುವ ಆಹಾರ ಸವಿಬೇಕು ಅಂದ್ರೆ ಪಾಲಕ್ ದಾಲ್ ಖಿಚಡಿ ಒಮ್ಮೆ ಟ್ರೈ ಮಾಡಿ. ಹಸಿರು ಪಾಲಕ್ ಸೊಪ್ಪಿನ ಪೋಷಕಾಂಶಗಳು ಮತ್ತು ಬೇಳೆಯ ಶಕ್ತಿ ಒಂದೇ ಪಾತ್ರೆಯಲ್ಲಿ ಸೇರಿಕೊಂಡಿರುವುದರಿಂದ ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ. ಜೀರ್ಣಕ್ರಿಯೆಗೆ ಸುಲಭವಾಗಿರುವ ಈ ಖಿಚಡಿ, ಬ್ಯುಸಿ ಮಾರ್ನಿಂಗ್ ನಲ್ಲೂ ಬೇಗ ತಯಾರಾಗುತ್ತದೆ.
ಬೇಕಾಗುವ ಪದಾರ್ಥಗಳು:
ಅಕ್ಕಿ – ½ ಕಪ್
ತೊಗರಿ ಬೇಳೆ – ½ ಕಪ್
ಪಾಲಕ್ ಸೊಪ್ಪು – 1 ಕಪ್
ಈರುಳ್ಳಿ – 1
ಹಸಿಮೆಣಸು – 1–2
ಶುಂಠಿ – 1 ಚಮಚ
ಸಾಸಿವೆ – ½ ಚಮಚ
ಜೀರಿಗೆ – ½ ಚಮಚ
ಅರಿಶಿನ ಪುಡಿ – ¼ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ – 1–2 ಚಮಚ
ನೀರು – ಅಗತ್ಯವಿರುವಷ್ಟು
ತಯಾರಿಸುವ ವಿಧಾನ:
ಅಕ್ಕಿ ಮತ್ತು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು 15 ನಿಮಿಷ ನೆನೆಸಿಡಿ. ಕುಕ್ಕರ್‌ನಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಸಿಡಿಸಿ. ನಂತರ ಈರುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಸ್ವಲ್ಪ ಹುರಿಯಿರಿ. ಈಗ ಕತ್ತರಿಸಿದ ಪಾಲಕ್ ಸೇರಿಸಿ ಫ್ರೈ ಮಾಡಿ. ಈಗ ನೆನೆಸಿಟ್ಟ ಅಕ್ಕಿ–ಬೇಳೆ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯವಿರುವಷ್ಟು ನೀರು ಹಾಕಿ ಕುಕ್ಕರ್ ಮುಚ್ಚಿ 3–4 ಸಿಟ್ಟು ಬೇಯಿಸಿ.

