ಬೆಳಗಿನ ಉಪಹಾರಕ್ಕೆ ಯಾವಾಗಲೂ ಅದೇ ಇಡ್ಲಿ, ದೋಸೆ ತಿಂದು ಬೇಜಾರಾಗಿದ್ರೆ, ಸ್ವಲ್ಪ ವಿಭಿನ್ನವಾದರೂ ಹೊಟ್ಟೆ ತುಂಬಿಸುವ ಮತ್ತು ಶಕ್ತಿನೀಡುವ ಫಿಶ್ ಫ್ರೈಡ್ ರೈಸ್ ಒಳ್ಳೆಯ ಆಯ್ಕೆ. ಉಳಿದ ಅನ್ನವನ್ನು ಬಳಸಿಕೊಂಡು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ರೆಸಿಪಿ, ಪ್ರೋಟೀನ್‌ಗಳಿಂದ ದಿನದ ಆರಂಭಕ್ಕೆ ಉತ್ತಮ ಎನರ್ಜಿ ಕೊಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಅನ್ನ – 2 ಕಪ್
ಎಲುಬಿಲ್ಲದ ಮೀನು ತುಂಡುಗಳು – 200 ಗ್ರಾಂ
ಈರುಳ್ಳಿ – 1
ಹಸಿರು ಮೆಣಸು – 2
ಬೆಳ್ಳುಳ್ಳಿ – 1 ಟೇಬಲ್‌ಸ್ಪೂನ್
ಶುಂಠಿ – 1 ಟೀಸ್ಪೂನ್
ಸೋಯಾ ಸಾಸ್ – 1 ಟೇಬಲ್‌ಸ್ಪೂನ್
ಮೆಣಸು ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 2 ಟೇಬಲ್‌ಸ್ಪೂನ್
ಸ್ಪ್ರಿಂಗ್ ಓನಿಯನ್ / ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮೀನು ಮ್ಯಾರಿನೇಷನ್‌ಗೆ:
ಉಪ್ಪು – ಸ್ವಲ್ಪ
ಮೆಣಸು ಪುಡಿ – ಸ್ವಲ್ಪ
ನಿಂಬೆ ರಸ – 1 ಟೀಸ್ಪೂನ್
ತಯಾರಿಸುವ ವಿಧಾನ:
ಮೊದಲು ಮೀನು ತುಂಡುಗಳಿಗೆ ಮ್ಯಾರಿನೇಷನ್ ಪದಾರ್ಥಗಳನ್ನು ಹಾಕಿ 10 ನಿಮಿಷ ಬಿಟ್ಟುಬಿಡಿ. ನಂತರ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಮೀನು ತುಂಡುಗಳನ್ನು ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಿ. ಅದೇ ಪ್ಯಾನ್‌ಗೆ ಇನ್ನಷ್ಟು ಎಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸು ಹಾಕಿ ಹುರಿಯಿರಿ. ನಂತರ ಈರುಳ್ಳಿ ಸೇರಿಸಿ ಸ್ವಲ್ಪ ಮೃದುವಾಗುವವರೆಗೆ ಹುರಿಯಿರಿ. ಈಗ ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸೋಯಾ ಸಾಸ್, ಉಪ್ಪು ಮತ್ತು ಮೆಣಸು ಪುಡಿ ಹಾಕಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಕೊನೆಗೆ ಫ್ರೈ ಮಾಡಿದ ಮೀನು ತುಂಡುಗಳನ್ನು ಸೇರಿಸಿ ನಿಧಾನಕ್ಕೆ ಮಿಕ್ಸ್ ಮಾಡಿ. ಸ್ಪ್ರಿಂಗ್ ಓನಿಯನ್ ಅಥವಾ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ಬಿಸಿ ಬಿಸಿ ಸರ್ವ್ ಮಾಡಿ.

