ಬೆಳಗ್ಗೆ ಲೈಟ್ ಆಗಿ ತಿನ್ಬೇಕು ಅಂದಾಗ ಮಸಾಲೆಗಳಿಲ್ಲದ ಈ Corn Herbs Rice ಒಳ್ಳೆಯ ಆಯ್ಕೆ. ಸಿಹಿ ಜೋಳದ ಸಹಜ ಸಿಹಿತನಕ್ಕೆ ಹರ್ಬ್ಸ್‌ಗಳ ಸುಗಂಧ ಸೇರಿದಾಗ ಅನ್ನಕ್ಕೆ ವಿಶಿಷ್ಟ ರುಚಿ ಬರೋದಂತು ಖಂಡಿತ.
ಬೇಕಾಗುವ ಪದಾರ್ಥಗಳು
ಅನ್ನ – 2 ಕಪ್
Sweet corn – 1 ಕಪ್
ಈರುಳ್ಳಿ – 1
ಬೆಳ್ಳುಳ್ಳಿ – 4–5 ಎಸಳು
ಹಸಿಮೆಣಸು – 1
ಬೆಣ್ಣೆ ಅಥವಾ ಆಲಿವ್ ಆಯಿಲ್ – 1–2 ಟೀಸ್ಪೂನ್
ಮಿಶ್ರ ಹರ್ಬ್ಸ್ (Oregano, Basil, Thyme) – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ತಯಾರಿಸುವ ವಿಧಾನ
ಮೊದಲಿಗೆ ಪ್ಯಾನ್‌ನಲ್ಲಿ ಬೆಣ್ಣೆ ಅಥವಾ ಆಲಿವ್ ಆಯಿಲ್ ಬಿಸಿ ಮಾಡಿ.ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಸ್ವಲ್ಪ ಹುರಿಯಿರಿ. ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಹುರಿಯಿರಿ. ಈಗ ಸಿಹಿ ಜೋಳದ ಕಾಳು ಹಾಕಿ 2–3 ನಿಮಿಷ ಬೇಯಿಸಿ, ಮಿಶ್ರ ಹರ್ಬ್ಸ್, ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ.
ಈಗ ಅನ್ನವನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಿರಿ.

