Thursday, January 8, 2026

Rice series 79 | ಫಟಾಫಟ್ ಅಂತ ರೆಡಿ ಆಗುತ್ತೆ ನೋಡಿ ಈ ಸಿಂಪಲ್ & ಟೇಸ್ಟಿ ಬಟರ್ ಕಾರ್ನ್ ರೈಸ್!

ಕೆಲವೊಮ್ಮೆ ಲೈಟ್ ಆಗಿರೋ ಆದ್ರೆ ರುಚಿಯಾಗಿರುವ ಬ್ರೇಕ್ ಫಾಸ್ಟ್ ಮಾಡ್ಬೇಕು ಅನಿಸುತ್ತೆ. ಅಂಥ ಸಮಯದಲ್ಲಿ ನಾನು ಆಯ್ಕೆಮಾಡೋದು ಬಟರ್ ಕಾರ್ನ್ ರೈಸ್. ಕಡಿಮೆ ಪದಾರ್ಥಗಳು, ಸರಳ ವಿಧಾನ & ಮನಸ್ಸಿಗೆ ಇಷ್ಟವಾಗುವ ಸಾಫ್ಟ್ ಟೇಸ್ಟ್ ಇದೇ ಈ ರೈಸ್ ಅನ್ನು ಮತ್ತೆ ಮತ್ತೆ ಮಾಡೋಣ ಅನ್ನಿಸೋದು.

ಬೇಕಾಗುವ ಸಾಮಗ್ರಿಗಳು:

ಅನ್ನ – 1 ಕಪ್
ಸ್ವೀಟ್ ಕಾರ್ನ್ – 1 ಕಪ್ (ಬೇಯಿಸಿದ್ದು)
ಬಟರ್ – 2 ಟೇಬಲ್ ಸ್ಪೂನ್
ಈರುಳ್ಳಿ – 1
ಹಸಿಮೆಣಸಿನಕಾಯಿ – 1
ಬೆಳ್ಳುಳ್ಳಿ – 1 ಟೀ ಸ್ಪೂನ್
ಮೆಣಸು ಪುಡಿ – ಅರ್ಧ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಒಂದು ಪ್ಯಾನ್‌ನಲ್ಲಿ ಬಟರ್ ಹಾಕಿ ಕರಗಿದ ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಬಾಡಿಸಿ. ನಂತರ ಹಸಿಮೆಣಸಿನಕಾಯಿ ಹಾಗೂ ಸ್ವೀಟ್ ಕಾರ್ನ್ ಸೇರಿಸಿ ಎರಡು ನಿಮಿಷ ಫ್ರೈ ಮಾಡಿ. ಮೆಣಸು ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬೇಯಿಸಿದ ಅನ್ನವನ್ನು ಸೇರಿಸಿ ನಿಧಾನವಾಗಿ ಕಲಸಿ. ಎಲ್ಲಾ ಪದಾರ್ಥಗಳು ಒಟ್ಟಾಗಿ ಬೆರೆತ ಬಳಿಕ ಗ್ಯಾಸ್ ಆರಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

error: Content is protected !!